ಬೆಂಗಳೂರು :ಮರಾಠಿ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಟೌನ್ ಹಾಲ್ ಬಳಿ ಮುಷ್ಕರ ನಡೆಸಲಾಯಿತು. ಇದಕ್ಕೂ ಮೊದಲು, ಕಾರ್ಪೊರೇಷನ್ ಬಳಿ ವಾಟಾಳ್ ದಿಢೀರ್ ಪ್ರತಿಭಟನೆ ಹಿನ್ನೆಲೆ ಕಿಲೋ ಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಯಿತು. ರಸ್ತೆ ತಡೆದು ಪ್ರತಿಭಟನೆ ನಡೆಸಿದ ಹಿನ್ನೆಲೆ ವಾಹನ ಸವಾರರು ಹೈರಾಣಾದರು.
ಬಳಿಕ ಮಾತಾನಾಡಿದ ವಾಟಾಳ್ ನಾಗರಾಜ್, ಸಿಎಂ ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಯಡಿಯೂರಪ್ಪ ಒಬ್ಬ ಹಿಟ್ಲರ್ ಎಂದು ಕಿಡಿಕಾಡಿದರು. ಪ್ರತಿಭಟನೆಗೆ ಅವಕಾಶ ನೀಡದ ಪೊಲೀಸ್ ಆಯುಕ್ತ ಕಮಲ್ ಪಂಥ್ ಬಗ್ಗೆಯೂ ವಾಟಾಳ್ ಆಕ್ರೋಶ ವ್ಯಕ್ತಪಡಿಸಿದರು.
ದೇಶಕ್ಕೆ ಯಡಿಯೂರಪ್ಪ ನಾಲಾಯಕ್, ನನಗೆ ಕೊಟ್ಟಿರುವ ಎಸ್ಕಾರ್ಟ್ನ್ನು ಅವರು ಹಿಂಪಡೆದಿದ್ದಾರೆ. ಯಡಿಯೂರಪ್ಪನವರೇ ಇದರಿಂದ ನಾನು ಹೆದರುವುದಿಲ್ಲ. ಪೊಲೀಸರು ಅಧಿಕಾರ ಬಳಸಿ ಕನ್ನಡ ಹೋರಾಟಗಾರರ ಬಂಧಿಸಿದ್ದಾರೆ.