ಬೆಂಗಳೂರು :ವಿಧಾನಪರಿಷತ್ತಿನಲ್ಲಿ ಸದಸ್ಯರು ನಡೆದುಕೊಂಡ ವೈಖರಿಯನ್ನು ಖಂಡಿಸಿ ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಪರಿಷತ್ ಗಲಾಟೆಗೆ ಖಂಡನೆ: ನಾಯಿಗಳ ಮೆರವಣಿಗೆ ಮಾಡಿದ ವಾಟಾಳ್ - ಪರಿಷತ್ ಗಲಾಟೆಗೆ ವಾಟಾಳ್ ನಾಗರಾಜ್ ಖಂಡನೆ
ವಿಧಾನಪರಿಷತ್ತಿನಲ್ಲಿ ಸದಸ್ಯರು ನಡೆದುಕೊಂಡ ರೀತಿಗೆ ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದು, ನಾಯಿಗಳ ಮೆರವಣಿಗೆ ಮಾಡುವ ಮೂಲಕ ವ್ಯಂಗ್ಯವಾಡಿದ್ದಾರೆ.
![ಪರಿಷತ್ ಗಲಾಟೆಗೆ ಖಂಡನೆ: ನಾಯಿಗಳ ಮೆರವಣಿಗೆ ಮಾಡಿದ ವಾಟಾಳ್ ಪರಿಷತ್ ಗಲಾಟೆ ಖಂಡಿಸಿ ನಾಯಿಗಳ ಮೆರವಣಿಗೆ ಮಾಡಿದ ವಾಟಾಳ್ ನಾಗರಾಜ್](https://etvbharatimages.akamaized.net/etvbharat/prod-images/768-512-9908681-thumbnail-3x2-bngjpg.jpg)
Vatal Nagaraj made a dog parade condemning Parishad riots
ಪರಿಷತ್ ಗಲಾಟೆ ಖಂಡಿಸಿ ನಾಯಿಗಳ ಮೆರವಣಿಗೆ ಮಾಡಿದ ವಾಟಾಳ್ ನಾಗರಾಜ್
ಮೈಸೂರು ಬ್ಯಾಂಕ್ ವೃತ್ತದಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸೇರಿದ ಕಾರ್ಯಕರ್ತರು, ಪರಿಷತ್ನಲ್ಲಿ ನಡೆದ ಘಟನೆ ಒಂದು ಕಪ್ಪು ಚುಕ್ಕೆಯಾಗಿದೆ. ಮಾನ, ಮಾರ್ಯಾದೆ, ಗೌರವ ಇದ್ದರೆ ಎಲ್ಲಾ ವಿಧಾನಪರಿಷತ್ ಸದಸ್ಯರು ಕೂಡಲೇ ರಾಜೀನಾಮೆ ಕೊಡಬೇಕು. ಎಳೆದಾಟ, ಕೂಗಾಟ ಸಭಾಪತಿ ಪೀಠದ ಮುತ್ತಿಗೆ, ಸಭಾಪತಿಯವರನ್ನು ಅಕ್ರಮವಾಗಿ ಬಂಧಿಸಿ ಪ್ರಜಾಪ್ರಭುತ್ವದ ಮಾನ ಗೌರವ ಹರಾಜು ಹಾಕಿದ್ದಾರೆ. ಇವರಿಗೆ ಒಂದು ನಿಮಿಷವೂ ಸದನದಲ್ಲಿರಲು ಯೋಗ್ಯತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಓದಿ: ಕಮಲ್‌ನಾಥ್ ಸರ್ಕಾರ ಉರುಳಿಸಿದ್ದು ಮೋದಿ: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ