ಬೆಂಗಳೂರು:ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಕೇಳಿ ಬಂದಿರುವ ಡ್ರಗ್ಸ್ ಜಾಲದ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸಲಿ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್ ಮಾಫಿಯಾ ನಂಟಿದೆ ಎಂಬ ವಿಷಯದ ಬಗ್ಗೆ ವಾಟಾಳ್ ನಾಗರಾಜ್ ಪ್ರತಿಕ್ರಿಯಿಸಿ, ಸದ್ಯದ ಚಿತ್ರರಂಗದ ಬಗ್ಗೆ ಹಾಗೂ ಪೊಲೀಸ್ ಇಲಾಖೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕನ್ನಡ ಚಿತ್ರರಂಗವು ಮಹನೀಯರ ನೆರಳಲ್ಲಿ ಬೆಳೆದು ಬಂದಿದೆ. ಗುಬ್ಬಿ ವೀರಣ್ಣ, ಡಾ. ರಾಜ್ ಕುಮಾರ್, ಕಲ್ಯಾಣ ಕುಮಾರ್, ಉದಯ್ ಕುಮಾರ್, ಪಂತುಲು ಅವರಂಥ ಸಾವಿರಾರು ಜನ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ ಎಂದರು.
ಬಿ, ಜಯಮ್ಮ, ಸತ್ಯವಾನ್ ಸಾವಿತ್ರಿ, ಪಂಡರಿ ಬಾಯಿ, ಲೀಲಾವತಿ ಅವರಂಥ ಉತ್ತಮ ನಟಿಯರನ್ನು ಕನ್ನಡ ಚಿತ್ರರಂಗ ಕಂಡಿದೆ. ಅದರೆ ಈಗಿನ ನಟಿ ರಾಗಿಣಿ ನನಗಂತೂ ಗೊತ್ತಿಲ್ಲ, ಚಿತ್ರರಂಗದಲ್ಲಿ ಡ್ರಗ್ಸ್ ಮಾಫಿಯಾ ಇದೆ ಎಂಬುದರ ಬಗ್ಗೆ ದಿನಕ್ಕೊಂದು ವಿಷಯ ಬೆಳಕಿಗೆ ಬರುತ್ತಿವೆ. ಈ ವಿಷಯದಲ್ಲಿ ಗೃಹಮಂತ್ರಿ ಬೊಮ್ಮಾಯಿ ಯಾವುದೇ ಒತ್ತಡಕ್ಕೆ ಮಣಿಯದೆ ಎಷ್ಟೇ ಪ್ರಭಾವಿಗಳಿದ್ದರೂ ಸಮಗ್ರ ತನಿಖೆ ಮಾಡಬೇಕು ಎಂದು ವಾಟಾಳ್ ಆಗ್ರಹಿಸಿದರು.