ಬೆಂಗಳೂರು :ಕೊರೊನಾ ಭೀತಿ ನಡುವೆಯೂ ದೇವಸ್ಥಾನ, ಮಸೀದಿ, ಚರ್ಚ್ ಗಳಲ್ಲಿ ಪ್ರಾರ್ಥನೆ ಪೂಜೆಗೆ ಆಗ್ರಹಿಸಿದ್ದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಸದಾಶಿವನಗರ ಪೊಲೀಸರು ಗೃಹ ಬಂಧನದಲ್ಲಿ ಇರಿಸಿದ್ದಾರೆ.
ಲಾಕ್ ಡೌನ್ ಆದೇಶ ಮೀರಿ ಪ್ರತಿಭಟನೆ ಸಿದ್ದವಾಗಿದ್ದ ವಾಟಾಳ್ಗೆ ಗೃಹ ಬಂಧನ - police arrest valal nagaraj
ಲಾಕ್ ಡೌನ್ ಆದೇಶ ಉಲ್ಲಂಘಿಸಲು ಮುಂದಾಗಿದ್ದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಸದಾಶಿವನಗರ ಪೊಲೀಸರು ಗೃಹ ಬಂಧನದಲ್ಲಿ ಇರಿಸಿದ್ದಾರೆ.
ವಾಟಾಳ್ ನಾಗರಾಜ್
ಸಾರ್ವಜನಿಕರಿಗೆ ಹೊರತುಪಡಿಸಿ ಅರ್ಚಕರು, ಮೌಲ್ವಿಗಳು ಹಾಗೂ ಪಾದ್ರಿಗಳಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು. ಅಲ್ಲದೇ ಸರ್ಕಾರದ ಮೇಲೆ ಒತ್ತಡ ತರಲು ಮೈಸೂರು ಬ್ಯಾಂಕ್ ವೃತ್ತದಲ್ಲಿ ಏಕಾಂಗಿಯಾಗಿ ಪ್ರತಿಭಟನೆ ಮಾಡಲು ವಾಟಾಳ್ ಸಿದ್ಧತೆ ನಡೆಸಿದ್ದರು.
ಈ ಮೂಲಕ ಲಾಕ್ ಡೌನ್ ಆದೇಶ ಉಲ್ಲಂಘಿಸಲು ಮುಂದಾಗಿದ್ದರು. ಈ ವಿಷಯ ಅರಿತ ಸದಾಶಿವ ನಗರ ಪೊಲೀಸರು ವಾಟಾಳ್ ಅವರನ್ನು ಗೃಹ ಬಂಧನದಲ್ಲಿ ಇರಿಸಿದ್ದಾರೆ.