ಬೆಂಗಳೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೆಟ್ರೋಲಿಯಂ ಉತ್ಪನ್ನಗಳ ವ್ಯಾಟ್ ದರ ಕಡಿಮೆ ಮಾಡುವ ಮೂಲಕ ಜನರ ಹೊರೆ ಕಡಿಮೆ ಮಾಡಿದ್ದಾರೆ. ಪ್ರಧಾನಿ ಮೋದಿಯವರ ಸಲಹೆಗೆ ಕೂಡಲೇ ಸ್ಪಂದಿಸಿದ ಕರ್ನಾಟಕ ಸರ್ಕಾರವು ವ್ಯಾಟ್ ದರವನ್ನು ಕಡಿಮೆ ಮಾಡಿದ್ದರಿಂದ, ಖಜಾನೆಗೆ ಬರುವ 5,314 ಕೋಟಿ ರೂಪಾಯಿ ಕಡಿಮೆ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಮೆಚ್ಚುಗೆ ಸೂಚಿಸಿದ್ದಾರೆ.
ಪೆಟ್ರೋಲಿಯಂ ಉತ್ಪನ್ನಗಳ ವ್ಯಾಟ್ ದರ ಕಡಿತ: ಸಿಎಂ ನಿರ್ಧಾರಕ್ಕೆ ಕಟೀಲ್ ಮೆಚ್ಚುಗೆ - ವ್ಯಾಟ್ ದರವನ್ನು ಕಡಿಮೆ ಮಾಡಿದ್ದರಿಂದ, ಖಜಾನೆಗೆ 5,314 ಕೋಟಿ ರೂಪಾಯಿ ಕಡಿಮೆ
ಪ್ರಧಾನಿ ಮೋದಿಯವರ ಸಲಹೆಗೆ ಕೂಡಲೇ ಸ್ಪಂದಿಸಿದ ಕರ್ನಾಟಕ ಸರ್ಕಾರವು ವ್ಯಾಟ್ ದರವನ್ನು ಕಡಿಮೆ ಮಾಡಿದ್ದರಿಂದ ಖಜಾನೆಗೆ ಬರುವ 5,314 ಕೋಟಿ ರೂಪಾಯಿ ಕಡಿಮೆ ಆಗಿದೆ ಎಂದು ನಳಿನ್‍ಕುಮಾರ್ ಕಟೀಲ್ ಹೇಳಿದ್ದಾರೆ.
![ಪೆಟ್ರೋಲಿಯಂ ಉತ್ಪನ್ನಗಳ ವ್ಯಾಟ್ ದರ ಕಡಿತ: ಸಿಎಂ ನಿರ್ಧಾರಕ್ಕೆ ಕಟೀಲ್ ಮೆಚ್ಚುಗೆ ಸಿಎಂ ನಿರ್ಧಾರಕ್ಕೆ ಕಟೀಲ್ ಮೆಚ್ಚುಗೆ](https://etvbharatimages.akamaized.net/etvbharat/prod-images/768-512-15142393-thumbnail-3x2-bin.jpg)
ಜನರ ಹೊರೆ ಕಡಿಮೆ ಮಾಡುವ ದೃಷ್ಟಿಯಿಂದ ನಮ್ಮ ಸರ್ಕಾರ ಕ್ರಮ ಕೈಗೊಂಡಿದೆ. ಬಿಜೆಪಿ ಕ್ರಮಕ್ಕೆ ಜನಬೆಂಬಲ ಖಚಿತ. ಆದರೆ, ಕಾಂಗ್ರೆಸ್ ಬೆಂಬಲಿತ ಸರ್ಕಾರ ಆಡಳಿತದಲ್ಲಿರುವ ಮಹಾರಾಷ್ಟ್ರ ರಾಜ್ಯದಲ್ಲಿ ವ್ಯಾಟ್ ಕಡಿಮೆ ಮಾಡದೆ 3,472 ಕೋಟಿ ರೂಪಾಯಿ ಆದಾಯವನ್ನು ಅಲ್ಲಿನ ಸರ್ಕಾರ ಸಂಗ್ರಹಿಸಿದೆ. ತಮಿಳುನಾಡು ಸರ್ಕಾರ 2,924 ಕೋಟಿ ರೂಪಾಯಿ, ಪಶ್ಚಿಮ ಬಂಗಾಳ ವ್ಯಾಟ್ ಮೂಲಕ 1,343 ಕೋಟಿ ರೂ. ಆದಾಯ ಗಳಿಸಿದೆ. ಆದರೆ, ಬಿಜೆಪಿ ಆಡಳಿತ ಇರುವ ಕರ್ನಾಟಕ, ಗುಜರಾತ್ ಮತ್ತು ಉತ್ತರ ಪ್ರದೇಶ ರಾಜ್ಯ ಸರ್ಕಾರಗಳು ಜನರ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ವ್ಯಾಟ್ ಕಡಿಮೆ ಮಾಡುವ ಮೂಲಕ ಕೂಡಲೇ ಸ್ಪಂದಿಸಿವೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ: ಸಿಐಡಿಯಿಂದ ಆರೋಪಿ ಯುವತಿಯ ಬಂಧನ