ಬೆಂಗಳೂರು: ಶಿವಾಜಿನಗರ ಕ್ಷೇತ್ರದ ಸಂಪಗಿರಾಮನಗರ ವಾರ್ಡ್‌ನ ಬಿಬಿಎಂಪಿ ಸದಸ್ಯ ವಸಂತ್ ಕುಮಾರ್ ಎರಡು ದಿಗಳ ಹಿಂದಷ್ಟೇ 'ಕೈ' ಕೊಟ್ಟು ಕಮಲ ಹಿಡಿದಿದ್ದರು. ಈಗ ಮತ್ತೆ ತವರಿಗೆ ಮರಳಿದ್ದಾರೆ.
ಕ್ಷೇತ್ರದಲ್ಲಿನ ಅಭಿವೃದ್ಧಿ ಕಾರ್ಯಗಳಿಗಾಗಿ ನಾನು ಬಿಜೆಪಿ ಸೇರುತ್ತಿದ್ದೇನೆ ಎಂದು ಹೇಳಿದ್ದ ವಸಂತ್ ಕುಮಾರ್, ಇದೀಗ ಯೂ ಟರ್ನ್ ಹೊಡೆದಿದ್ದು, ನನ್ನನ್ನು ಸಿಎಂ ನಿವಾಸಕ್ಕೆ ಕರೆದೊಯ್ಯದು ಅಚಾನಕ್ ಆಗಿ ಬಿಜೆಪಿಗೆ ಸೇರಿಸಿದ್ದರು ಎಂದು ಕೇಸರಿ ಪಡೆ ವಿರುದ್ಧ ಆರೋಪ ಮಾಡಿದ್ದಾರೆ.
ಇದರ ಬೆನ್ನಲ್ಲೇ ದಿನೇಶ್ ಗುಂಡೂರಾವ್ ಬಿಜೆಪಿ ವಿರುದ್ಧ ಕಿಡಿ ಕಾರಿದ್ದು, ಬಿಜೆಪಿಯವರು ಮಾಡುತ್ತಿರುವುದ ಏನು ಎಂಬುದಕ್ಕೆ ಇದು ತಾಜಾ ಉದಾಹರಣೆಯಾಗಿದೆ. ನಮ್ಮ ಪಕ್ಷದವರನ್ನು ಬೇಟೆಯಾಡುವುದೇ ಅವರ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನಾಯಕರ ಮೇಲೆ ನಂಬಿಕೆ ಇಲ್ಲದ ಕಾರಣದಿಂದಲೇ ವಸಂತ್ ಕುಮಾರ್ ಮರಳಿ ಮಾತೃ ಪಕ್ಷಕ್ಕೆ ಬಂದಿದ್ದು, ಬಿಜೆಪಿಯವರು ಭೇಟೆಯಾಡುವುದನ್ನು ಬಿಟ್ಟು ಅವರ ಕೆಲಸ ಅವರು ಮಾಡಲಿ ಎಂದಿದ್ದಾರೆ.
ಇನ್ನು ಮೊನ್ನೆ ದಿಢೀರ್ ಆಗಿ ವಸಂತ್ ಕುಮಾರ್ ಪಕ್ಷ ತೊರೆದಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಕಂಗಾಲಾಗಿ ಗಳಗಳನೆ ಅತ್ತಿದ್ದರು. ವಸಂತ್ ಕುಮಾರ್ ನಡೆಯಿಂದ ಅರ್ಷದ್ ಕಳವಳಕ್ಕೀಡಾಗಿದ್ದರು. ವಸಂತ ಕುಮಾರ್ ಅರ್ಷದ್ ಅವರ ಕಟ್ಟಾ ಬೆಂಬಲಿಗರಾಗಿದ್ದರು.