ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣ ಸಂಬಂಧ ಮೂರು ಆಯಾಮಗಳಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಫಾರ್ಮ್ ಹೌಸ್ನಿಂದ ಬರುವಾಗ ಕಿಡ್ನಾಪ್ ಆಗಿರುವುದಾಗಿ ದೂರಿನಲ್ಲಿ ವರ್ತೂರು ಉಲ್ಲೇಖಿಸಿದ್ದು, ಕಿಡ್ನಾಪ್ ಆದ ಸ್ಥಳ ಪರಿಶೀಲನೆ, ಅವರನ್ನ ಕಡೆಯದಾಗಿ ಕಿಡ್ನಾಪರ್ಸ್ ಇಳಿಸಿದ ಹೊಸಕೋಟೆಯ ಶಿವನಾಪುರ ಬಳಿ ಸ್ಥಳ ಪರಿಶೀಲನೆ ಹಾಗೂ ಕಾರು ಪತ್ತೆಯಾದ ಬೆಳ್ಳಂದೂರು ಠಾಣಾ ವ್ಯಾಪ್ತಿಯ ಸ್ಥಳದಲ್ಲಿ ಪರಿಶೀಲನೆ ನಡೆಸಲಿದ್ದಾರೆ. ವೈಟ್ಫೀಲ್ಡ್ ಡಿಸಿಪಿ ದೇವರಾಜ್ ನೇತೃತ್ವದಲ್ಲಿ ಬೆಳ್ಳಂದೂರು ಠಾಣಾ ಇನ್ಸ್ಪೆಕ್ಟರ್ ರಿಂದ ತನಿಖೆ ನಡೆಯುತ್ತಿದೆ.
ಈ ಮೂರು ಕಡೆ ಸಿಗಬಹುದಾದ ಸಿಸಿಟಿವಿ ಹಾಗೂ ಸುಳಿವುಗಳಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದು, ಇತ್ತೀಚಿಗೆ ವರ್ತೂರು ಪ್ರಕಾಶ್ ಮೊಬೈಲ್ಗೆ ಬಂದಿರುವ ಕರೆಗಳ ಸಿಡಿಆರ್ ಪರಿಶೀಲನೆ ಮಾಡುತ್ತಿದ್ದಾರೆ.
ಹಾಗೆಯೇ ಮಾಜಿ ಸಚಿವ ವರ್ತೂರು ಪ್ರಕಾಶ್ ಜೊತೆ ಅಪಹರಣಕ್ಕೆ ಒಳಗಾಗಿದ್ದ ಕಾರು ಚಾಲಕ ಸುನೀಲ್ಗೆ ಕೋಲಾರದಲ್ಲಿನ ಚೌಡೇಶ್ವರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗ್ತಿದೆ. ಆಸ್ಪತ್ರೆಯಲ್ಲಿ ಕಾರು ಅಪಘಾತದಲ್ಲಿ ಗಾಯವಾಗಿದೆ ಎಂದು ಚಿಕಿತ್ಸೆಗೆ ದಾಖಲಾಗಿರುವ ಕುರಿತು ಮಾಹಿತಿ ತಿಳಿದುಬಂದಿದೆ. ಸದ್ಯದಲ್ಲೇ ವರ್ತೂರು ಪ್ರಕಾಶ್ ಮಾಧ್ಯಮಗೋಷ್ಟಿ ನಡೆಸಲಿದ್ದಾರೆ.
ಇದನ್ನೂ ಓದಿ:ಸಿನಿಮೀಯ ಶೈಲಿಯಲ್ಲಿ ಅಪಹರಣ: ವರ್ತೂರು ಪ್ರಕಾಶ್ ನೀಡಿದ ದೂರಿನ ಸಂಪೂರ್ಣ ಮಾಹಿತಿ....