ಕರ್ನಾಟಕ

karnataka

ETV Bharat / state

ವಿವಿಧ ವಸತಿ ಯೋಜನೆ: ನಾಳೆಯೇ ಆದಾಯ ಮಿತಿ ಹೆಚ್ಚಳ ಆದೇಶ - ಸಚಿವ ವಿ. ಸೋಮಣ್ಣ - ವಿವಿಧ ವಸತಿ ಯೋಜನೆ: ಆದಾಯಮಿತಿ ಪ್ರಮಾಣ ಹೆಚ್ಚಳ ವಸತಿ ಸಚಿವ ವಿ. ಸೋಮಣ್ಣ

ವಿವಿಧ ವಸತಿ ಯೋಜನೆಗಳ ಆದಾಯದ ಮಿತಿಯನ್ನು ಗ್ರಾಮೀಣ ಪ್ರದೇಶದಲ್ಲಿ 32 ಸಾವಿರದಿಂದ 1.20 ಲಕ್ಷಕ್ಕೆ ಏರಿಸಲಾಗುವುದು, ನಗರ ಪ್ರದೇಶದಲ್ಲಿ 87 ಸಾವಿರದಿಂದ 3 ಲಕ್ಷಕ್ಕೆ ಏರಿಸಲಾಗುವುದು ಎಂದು ಪ್ರಶ್ನೋತ್ತರ ವೇಳೆಯಲ್ಲಿ ವಸತಿ ಸಚಿವರು ಉತ್ತರಿಸಿದರು.

Housing Minister v. Somanna  Housing Minister v. Somanna
ವಸತಿ ಸಚಿವ ವಿ. ಸೋಮಣ್ಣ

By

Published : Mar 14, 2022, 4:39 PM IST

ಬೆಂಗಳೂರು: ರಾಜ್ಯದ ವಿವಿಧ ವಸತಿ ಯೋಜನೆಗಳಲ್ಲಿ ಫಲಾನುಭವಿಗಳನ್ನು ಆಯ್ಕೆಗೆ ನಿಗದಿಪಡಿಸಿರುವ ಆದಾಯ ಮಿತಿ ಪ್ರಮಾಣವನ್ನು ಹೆಚ್ಚಳ ಮಾಡಿ ನಾಳೆಯೇ ಸರ್ಕಾರದಿಂದ ಆದೇಶ ಹೊರಡಿಸುತ್ತೇವೆ ಎಂದು ವಸತಿ ಸಚಿವ ವಿ.ಸೋಮಣ್ಣ ವಿಧಾನಸಭೆಯಲ್ಲಿ ಇಂದು ತಿಳಿಸಿದರು.

ವಿವಿಧ ವಸತಿ ಯೋಜನೆ: ಆದಾಯಮಿತಿ ಪ್ರಮಾಣ ಹೆಚ್ಚಳ ಪ್ರಶ್ನೋತ್ತರ ವೇಳೆಯಲ್ಲಿ ವಸತಿ ಸಚಿವರ ಉತ್ತರ

ಪ್ರಶ್ನೋತ್ತರ ವೇಳೆ ಶಾಸಕ ಸಿ.ಟಿ.ರವಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಗ್ರಾಮೀಣ ಭಾಗಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಆದಾಯ ಮಿತಿಯನ್ನು 32 ಸಾವಿರಕ್ಕೆ ನಿಗದಿಪಡಿಸಲಾಗಿತ್ತು. ಇನ್ಮುಂದೆ ಇದನ್ನು ಗ್ರಾಮೀಣ ಪ್ರದೇಶಗಳಲ್ಲಿ 1.20 ಲಕ್ಷಕ್ಕೆ ಹಾಗೂ ನಗರ ಪ್ರದೇಶಗಳಲ್ಲಿದ್ದ ಆದಾಯ ಮಿತಿ 87 ಸಾವಿರದಿಂದ 3 ಲಕ್ಷ ರೂ.ಗೆ ಏರಿಕೆ ಮಾಡುವುದಾಗಿ ಹೇಳಿದರು.

ಬಜೆಟ್ ಮೇಲೆ ಉತ್ತರ ಕೊಡುವಾಗ ಸಿಎಂ ಬಸವರಾಜ ಬೊಮ್ಮಾಯಿ ಅವರು ವಸತಿ ಯೋಜನೆಗಳ ಫಲಾನುಭವಿಗಳ ಆಯ್ಕೆಗೆ ನಿಗದಿಪಡಿಸಿದ ಆದಾಯ ಮಿತಿ ಪ್ರಮಾಣ ಹೆಚ್ಚಳ ಮಾಡುವ ಯೋಜನೆಯನ್ನು ಘೋಷಣೆ ಮಾಡಲಿದ್ದಾರೆ. ಇದರಿಂದ ಹೆಚ್ಚಿನ ಅನುಕೂಲವಾಗಲಿದೆ. ಈವರೆಗೂ ನಾವು ಗ್ರಾಮೀಣ ಭಾಗಗಳಲ್ಲಿ 32 ಸಾವಿರ ರೂ. ಹಾಗೂ ನಗರ ಪ್ರದೇಶಗಳಲ್ಲಿ 87 ಸಾವಿರ ರೂ. ಆದಾಯ ಮಿತಿಯನ್ನು ನೀಡಿದ್ದೆವು. ಮಾನದಂಡದ ಪ್ರಕಾರ ನಿಗದಿಪಡಿಸಲಾಗಿತ್ತು ಎಂದು ಹೇಳಿದರು.

ಸ್ಪೀಕರ್ ಅಸಮಾಧಾನ: ಸುಳ್ಳು ಪ್ರಮಾಣ ಪತ್ರಗಳನ್ನು ಕೊಡುವ ಕಾರ್ಯ ಆಗುತ್ತಿದೆ. ಈಗ ನಡೆಯುತ್ತಿರುವುದು ಅದೇ ಅಲ್ಲವೇ ಎಂದು ಅಸಮಧಾನ ವ್ಯಕ್ತಪಡಿಸಿದರು.

ಈ ವೇಳೆ ಶಾಸಕ ರಮೇಶ್‍ ಕುಮಾರ್ ಮಧ್ಯ ಪ್ರವೇಶಿಸಿ, ಹಿಂದಿನಿಂದಲೂ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಹೇಳಿಕೊಂಡು ಬರಲಾಗಿದೆ. ಆದಷ್ಟು ಬೇಗ ನಿರ್ಧಾರ ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು.

ಆಗ ಸಚಿವ ಸೋಮಣ್ಣ ಮಾತನಾಡಿ, ಇದು ನಾವು ನಿಗದಿಪಡಿಸಿಲ್ಲ. ಹಿಂದಿನ ಸರ್ಕಾರಗಳೇ ನಿಗದಿಪಡಿಸಿವೆ ಎಂದಾಗ ಬೇಸರಗೊಂಡ ಸ್ಪೀಕರ್, ನಿಮ್ಮ ಸರ್ಕಾರ ಬಂದು ಎರಡು ವರ್ಷವಾಗಿದೆ. ಇನ್ನು ಪರಿಶೀಲನೆ ಮಾಡಲಾಗುವುದು ಎಂದರೆ ಹೇಗೆ? ಇದಕ್ಕೆ ಏನಾದರೂ ಮಾಡಿ ಇತ್ಯರ್ಥಪಡಿಸಿ. ಆದಾಯ ಮಿತಿಯನ್ನು ನಿಗದಿಪಡಿಸುವುದು ಕಂದಾಯ ಇಲಾಖೆ ಅಧಿಕಾರಿಗಳು. ಸಚಿವ ಅಶೋಕ್ ಅವರು ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಸಲಹೆ ನೀಡಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಸಾಮಾನ್ಯ ವರ್ಗದವರಿಗೆ ಹೀಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಮಾನದಂಡವಿದೆ. ಇದು ಹಲವಾರು ವರ್ಷಗಳ ಬೇಡಿಕೆಯಾಗಿದೆ. ಮುಖ್ಯಮಂತ್ರಿಗಳು ಬಜೆಟ್ ಮೇಲೆ ಉತ್ತರಿಸುವಾಗ ಇದಕ್ಕೆ ಸಂಕ್ಷಿಪ್ತವಾದ ಉತ್ತರ ನೀಡುತ್ತಾರೆ. ನಾನು ಕೂಡ ಈಗಾಗಲೇ ಸಿಎಂ ಜೊತೆ ಚರ್ಚಿಸಿದ್ದೇನೆ. ಒಂದು ವಾರದೊಳಗೆ ಇತ್ಯರ್ಥಪಡಿಸುವ ಭರವಸೆ ನೀಡಿದರು ಎಂದರು.

ಇದನ್ನೂ ಓದಿ:ಜಾತಿ ಸೂಚಕ ಇರುವ ಗ್ರಾಮಗಳನ್ನು ರದ್ದುಪಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ : ಸಚಿವ ಆರ್. ಅಶೋಕ್

ABOUT THE AUTHOR

...view details