ಬೆಂಗಳೂರು:ಲಾಕ್ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರರು ಸ್ವಂತ ಊರಿಗೆ ತೆರಳಲು ಹೇಗೆ ಶ್ರಮಿಕ್ ರೈಲು ಪ್ರಾರಂಭ ಆಗಿತ್ತೋ, ಅದೇ ರೀತಿ ಈಗ ಕೈಗಾರಿಕೆಗಳಲ್ಲಿ ಕಾರ್ಮಿಕ ಕೊರತೆ ಇರುವ ಕಾರಣ ಕಾರ್ಮಿಕರು ವಾಪಸ್ ಬರಲು ಉಚಿತ ರೈಲು ವ್ಯವಸ್ಥೆ ಮಾಡಬೇಕು ಎಂದು ಕಾಸಿಯಾ ಸಂಘದ ಅಧ್ಯಕ್ಷ ಕೆ. ಬಿ. ಅರಸಪ್ಪ ಕೇಂದ್ರಕ್ಕೆ ಮನವಿ ಮಾಡಿದರು.
ನೌಕರರನ್ನ ಕರೆತರಲು ಶ್ರಮಿಕ್ ರೈಲು ಪ್ರಾರಂಭಿಸಿ : ಕಾಸಿಯಾ ಒತ್ತಾಯ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ವಿವಿಧ ಬೇಡಿಕೆಗಳನ್ನಿಟ್ಟು, ಕೈಗಾರಿಕೆ ಹಾಗೂ ಆರ್ಥಿಕ ಪುನಶ್ಚೇತನಕ್ಕೆ ಒತ್ತಾಯಿಸಿದರು.
ಇನ್ನು ರಾಜ್ಯ ಸರ್ಕಾರ ಕೈಗಾರಿಕೆಗಳಿಗೆ ಬೇಕಾದ ಮೂಲಸೌಕರ್ಯಕ್ಕೆ ಹೆಚ್ಚು ವೆಚ್ಚ ಮಾಡಬೇಕು. ಜಲಮಂಡಳಿ ಕೈಗಾರಿಕೆಗಳಿಗೆ ಎಂಎಸ್ಎಂಇ ಗಳಿಗೆ ಪ್ರತ್ಯೇಕ ಕಡಿಮೆ ದರ ವಿಧಿಸಬೇಕು. ಕಾರ್ಮಿಕ ಕಾಯ್ದೆ ಸಡಿಲಗೊಳಿಸಿ ಪಕ್ಕದ ರಾಜ್ಯದಲ್ಲಿ ಬೋನಸ್ ಕೊಡುವಲ್ಲಿ ವಿನಾಯಿತಿ ರೀತಿ ಸಡಿಲಿಕಾ ಕ್ರಮ ತರಬೇಕು. ಹೀಗೆ ಹಲವು ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ ಮನವಿ ಮಾಡಿದರು.
ಒಟ್ಟಾರೆ ಸಣ್ಣ ಕೈಗಾರಿಕೆಯಲ್ಲಿ ಕೋವಿಡ್-19 ಅನ್ಲಾಕ್ ನಂತರ ಅಲ್ಪ ಪ್ರಮಾಣದ ಚೇತರಿಕೆ ಕಾಣುಸುತ್ತಿದೆ. ಇದಕ್ಕೆ ಉತ್ತೇಜನೆ ನೀಡಲು ಮಂಗಳೂರು ಬಂದರಿಗೆ ರಸ್ತೆ ಸಂಪರ್ಕ ಉತ್ತಮವಾಗಿ ಮಾಡಬೇಕು. ಪ್ರಸ್ತುತ ಚೆನೈ ಪೋರ್ಟ್ ಗೆ ರಫ್ತಿಗೆ ಹೋಗುವ ಉತ್ಪನ್ನಗಳು ಮಂಗಳೂರಿನಿಂದ ಮಾಡಬಹುದು ಹಾಗೂ ರಾಜ್ಯಕ್ಕೆ ಇದು ಲಾಭದಾಯಕ ಎಂದರು.
ಇನ್ಸ್ಪೆಕ್ಟರ್ ರಾಜ್ ಹೋಗಬೇಕಿದೆ, ಅಧಿಕಾರಿಗಳು ಸುಖಾಸುಮ್ಮನೆ ಕೈಗಾರಿಕೆಗಳಿಗೆ ಭೇಟಿ ನೀಡಿ ಶೋಷಣೆ ಮಾಡುತ್ತಿದ್ದಾರೆ ಎಂದರು.