ಬೆಂಗಳೂರು:ಕೊರೊನಾ ಸೋಂಕಿತ ಗರ್ಭಿಣಿಯರ ಹಾಗೂ ಹಸುಗೂಸಿನ ಮಕ್ಕಳ ಪಾಲಿಗೆ ವಾಣಿವಿಲಾಸ ಆಸ್ಪತ್ರೆ ವೈದ್ಯರೇ ಆಪತ್ಭಾಂದವರು. ಇಂದಿಗೆ 200 ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿದ ಕೀರ್ತಿ ವಾಣಿವಿಲಾಸ್ ವೈದ್ಯರಿಗೆ ಸಲ್ಲುತ್ತೆ. ವಿಶೇಷ ಅಂದರೆ ಇಲ್ಲಿಯವರೆಗೆ ಯಾವ ಮಕ್ಕಳು ಸೋಂಕಿಗೆ ತುತ್ತಾಗಿಲ್ಲ.
ಎರಡೂ ಜೀವಗಳಿಗೆ ವಾಣಿವಿಲಾಸ್ ಆಸ್ಪತ್ರೆ ವೈದ್ಯರೇ ಆಪತ್ಭಾಂದವರು ವಿಕ್ಟೋರಿಯಾದ ಟ್ರಾಮಾ ಕೇರ್ ಸೆಂಟರ್ನಲ್ಲಿ ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಆಗ್ತಿದ್ದಂತೆ ಟ್ರಾನ್ಸ್‌ಪೋರ್ಟ್ ಇನ್ಕುಬೇಷನ್ ಅ್ಯಂಬುಲೆನ್ಸ್ ಮೂಲಕ ಮಕ್ಕಳನ್ನ ವಾಣಿವಿಲಾಸ್ಗೆ ಶಿಫ್ಟ್ ಮಾಡಲಾಗುತಿತ್ತು. ತಾಯಿಯಿಂದ ಮಗುವಿಗೆ ಸೋಂಕು ತಗುಲದಂತೆ ಎಚ್ಚರ ವಹಿಸಲಾಗುತ್ತಿತ್ತು.
ಎರಡೂ ಜೀವಗಳಿಗೆ ವಾಣಿವಿಲಾಸ್ ಆಸ್ಪತ್ರೆ ವೈದ್ಯರೇ ಆಪತ್ಭಾಂದವರು ಮೇ. 9 ರಿಂದ ಜುಲೈ. 17 ರವರೆಗೆ 100 ಗರ್ಭಿಣಿಯರಿಗೆ ಹಾಗೂ ಜುಲೈ. 17 ರಿಂದ ಆಗಸ್ಟ್ 10 ಅಂದರೆ ಇವತ್ತಿನವರೆಗೆ ಮತ್ತೆ 100 ಗರ್ಭಿಣಿಯರಿಗೆ ಯಶಸ್ವಿ ಚಿಕಿತ್ಸೆ ಮಾಡಿಲಾಗಿದೆ. ಒಟ್ಟಾರೆ, ಈವರೆಗೆ 200 ಹೆರಿಗೆಯಲ್ಲಿ ಯಾವುದು ಪ್ರಾಣಾಪಾಯ ಆಗಿಲ್ಲ, ಎಲ್ಲಾ ತಾಯಂದಿರು ಮಕ್ಕಳು ಕೂಡ ಸುರಕ್ಷಿತವಾಗಿದ್ದಾರೆ. ತಾಯಿ ನೆಗೆಟಿವ್ ಆಗಿ ಗುಣಮುಖ ಆಗ್ತಿದ್ದಂತೆ ಮಗುವನ್ನೂ ತಾಯಿ ಜೊತೆ ಡಿಸ್ಚಾರ್ಜ್ ಮಾಡಲಾಗುತ್ತಿದೆ.
ಎರಡೂ ಜೀವಗಳಿಗೆ ವಾಣಿವಿಲಾಸ್ ಆಸ್ಪತ್ರೆ ವೈದ್ಯರೇ ಆಪತ್ಭಾಂದವರು ಇತ್ತ ತಾಯಿ ಗುಣಮುಖವಾಗುವವರೆಗೆ ಹಸುಗೂಸು ಮಕ್ಕಳ ಪಾಲಿಗೆ ಕೊರೊನಾ ವಾರಿಯರ್ಸ್ಗಳೇ ತಾಯಂದಿರಾಗಿದ್ದಾರೆ. ಹಾಲಿನ ಪೌಡರ್ ಬಳಸಿ ಮಕ್ಕಳಿಗೆ ಹಾಲುಣಿಸುವುದು, ಮಕ್ಕಳನ್ನ ಸುರಕ್ಷಿತವಾಗಿ ನೋಡಿಕೊಳ್ಳುತ್ತಿದ್ದಾರೆ. ಇನ್ನು ಶೇ. 60%ರಷ್ಟು ಸಿ ಸೆಕ್ಷನ್ ಹಾಗೂ 40% ಸಾಮಾನ್ಯ ಹೆರಿಗೆ ಆಗಿರುವುದಾಗಿ ವಾಣಿವಿಲಾಸ್ನ ಮೆಡಿಕಲ್ ಸೂಪರಿಂಟೆಂಡೆಂಟ್ ಗೀತಾ ಶಿವಮೂರ್ತಿ ತಿಳಿಸಿದ್ದಾರೆ. ಮೊದ ಮೊದಲು ಎಲ್ಲ ವೈದ್ಯಕೀಯ ತಂಡಕ್ಕೂ ಚಿಕಿತ್ಸೆ ನೀಡಲು ಹಿಂಜರಿಕೆ ಇತ್ತು. ಆದರೆ ಇದೀಗ ಮಾನಸಿಕವಾಗಿ ದೈಹಿಕವಾಗಿ ಧೈರ್ಯದಿಂದ ಕೆಲಸ ಮಾಡುವಂತಾಗಿದೆ ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.