ಕರ್ನಾಟಕ

karnataka

ETV Bharat / state

ವಾಣಿ ವಿಲಾಸ್ ಹೆರಿಗೆ ಆಸ್ಪತ್ರೆ ಇನ್ಮುಂದೆ ಕೋವಿಡ್ ಹಾಸ್ಪಿಟಲ್​ ಆಗಿ ಬದಲಾವಣೆ..!

ಬೆಂಗಳೂರಿನ ಪ್ರತಿಷ್ಠಿತ ವಾಣಿ ವಿಲಾಸ್ ಹೆರಿಗೆ ಆಸ್ಪತ್ರೆಯನ್ನು ಸಂಪೂರ್ಣ ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಲು ಸರ್ಕಾರ ನಿರ್ಧರಿಸಿದೆ.

Vani Vilas Maternity Hospital
ವಾಣಿ ವಿಲಾಸ್ ಹೆರಿಗೆ ಆಸ್ಪತ್ರೆ ಇನ್ಮುಂದೆ ಕೋವಿಡ್ ಆಸ್ಪತ್ರೆಯಾಗಿ ಬದಲಾವಣೆ

By

Published : Jul 22, 2020, 4:28 PM IST

Updated : Jul 22, 2020, 4:47 PM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ನಿತ್ಯ ಸಾವಿರದ ಗಡಿ ದಾಟುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ, ಸಾವಿನ ಪ್ರಮಾಣದಲ್ಲೂ ಮೊದಲ ಸ್ಥಾನ‌ವನ್ನೇ ಪಡೆದುಕೊಂಡಿದೆ.

ಬೆಂಗಳೂರಿನಲ್ಲಿ ಈ ಪರಿ ಸೋಂಕಿತರ ಸಂಖ್ಯೆ ಹೆಚ್ಚಾಗಲು ಪ್ರಮುಖ ಕಾರಣವಾಗಿದ್ದು, ಅಂತರ್​​ ಜಿಲ್ಲಾ ಮಟ್ಟದಲ್ಲಿ ಜನರ ನಿರಂತರ ಓಡಾಟ ಅಂತ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದರು. ಹೀಗೆ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆಯಿಂದಾಗಿ ಆಸ್ಪತ್ರೆಗಳ ಕೊರತೆ ಉಂಟಾಗಿರುವುನ್ನು ಸರ್ಕಾರ ಹಾಗೂ ಆರೋಗ್ಯ ಇಲಾಖೆಯೇ ಒಪ್ಪಿಕೊಂಡಿದೆ.

ಈಗಾಗಲೇ, ಸರ್ಕಾರದ ವ್ಯಾಪ್ತಿಯಲ್ಲಿರುವ ಬಹುತೇಕ ಆಸ್ಪತ್ರೆಗಳು ಸೋಂಕಿತರಿಂದ ತುಂಬಿ ಹೋಗಿವೆ. ಇದಕ್ಕಾಗಿಯೇ ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಗಳಿಂದ ಶೇ.50 ನಷ್ಟು ಹಾಸಿಗೆ ನೀಡುವಂತೆ ತಾಕೀತು ಮಾಡಿದ್ದು, ಆದರೂ ಸರ್ಕಾರ ಮಾತಿಗೆ ಡೋಂಟ್ ಕೇರ್ ಅಂತ ಕಳ್ಳಾಟ ಆಡುತ್ತಿವೆ.

ಈ ಮಧ್ಯೆ ಸರ್ಕಾರವೂ ನಗರದ ಪ್ರತಿಷ್ಠಿತ ಹೆರಿಗೆ ಆಸ್ಪತ್ರೆ ವಾಣಿ ವಿಲಾಸ್ ಆಸ್ಪತ್ರೆಯನ್ನು, ಸಂಪೂರ್ಣ ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಲು ಸರ್ಕಾರ ಹೊರಟಿದೆ.‌ ಇದಕ್ಕಾಗಿ ಆಸ್ಪತ್ರೆ ಆಡಳಿತ ಮಂಡಳಿಗೂ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆಯನ್ನು ನೀಡಿದೆ. ಅಂದ ಹಾಗೇ ಇಷ್ಟು ಸಮಯಗಳ ಕಾಲ ವಾಣಿ ವಿಲಾಸ್ ಆಸ್ಪತ್ರೆಗೆ ಬರುವ ಗರ್ಭಿಣಿಯರನ್ನು ಮೊದಲು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿತ್ತು. ಒಂದು ವೇಳೆ ಸೋಂಕು ದೃಢಪಟ್ಟರೆ, ಪಕ್ಕ ವಿಕ್ಟೋರಿಯಾದಲ್ಲಿರುವ ಟ್ರಾಮಾ ಕೇರ್ ಸೆಂಟರ್​ಗೆ ರವಾನೆ‌ ಮಾಡಲಾಗುತ್ತಿತ್ತು. ವಾಣಿ ವಿಲಾಸ್ ಹಾಗೂ ವಿಕ್ಟೋರಿಯಾ ವೈದ್ಯರ ಸಮನ್ವಯದೊಂದಿಗೆ ಚಿಕಿತ್ಸೆ ನೀಡುತ್ತಿದ್ದಾರೆ‌‌.

ವಾಣಿ ವಿಲಾಸ್ ಹೆರಿಗೆ ಆಸ್ಪತ್ರೆ ಇನ್ಮುಂದೆ ಕೋವಿಡ್ ಹಾಸ್ಪಿಟಲ್​ ಆಗಿ ಬದಲಾವಣೆ

ನಾನ್ ಕೋವಿಡ್ ರೋಗಿಗಳ ಸ್ಥಿತಿಯೇನು..?

ಸದ್ಯ, ಸೋಂಕಿತ ಗರ್ಭಿಣಿಯರನ್ನ ಟ್ರಾಮಾ ಕೇರ್ ಸೆಂಟರ್​ನಲ್ಲಿ ಚಿಕಿತ್ಸೆಗೆ ಒಳಪಡಿಸಿದರೆ, ಇತ್ತ ಸೋಂಕು ಇಲ್ಲದ ನಾನ್ ಕೋವಿಡ್ ಗರ್ಭಿಣಿಯರಿಗೆ ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಸರ್ಕಾರ ಇದೀಗ ನಾನ್ ಕೋವಿಡ್ ಆಸ್ಪತ್ರೆಯನ್ನ ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಲು ಹೊರಟಿದೆ. ಈಗಾಗಲೇ ವಿಕ್ಟೋರಿಯಾ, ಕೆ.ಸಿ‌ ಜನರಲ್, ರಾಜೀವ್ ಗಾಂಧಿ ಎದೆರೋಗ, ಸಿ ವಿ ರಾಮನ್ ಜನರಲ್ ಆಸ್ಪತ್ರೆ ಸೇರಿದಂತೆ ಹಲವು ಆಸ್ಪತ್ರೆಗಳನ್ನ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಾಡು ಮಾಡಲಾಗಿದೆ.‌

ಇದೀಗ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿದ್ದು, ಬೆಂಗಳೂರಿನಲ್ಲಿ ಹಾಸಿಗೆ ಕೊರತೆಯನ್ನ ಎದುರಿಸುತ್ತಿರುವ ಸರ್ಕಾರವೂ, ವಾಣಿ ವಿಲಾಸ್ ಆಸ್ಪತ್ರೆಯನ್ನು ಸಹ ಕೋವಿಡ್ ಆಗಿ ಬದಲಾಯಿಸಲು ಮುಂದಾಗಿದೆ. ವಾಣಿವಿಲಾಸ್​​ಗೆ ಕೇವಲ ಬೆಂಗಳೂರಿಗರು ಮಾತ್ರವಲ್ಲದೇ ಬೇರೆ ರಾಜ್ಯಗಳಿಂದಲೂ ಜನರು ಚಿಕಿತ್ಸೆಗಾಗಿ ಬರುತ್ತಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಸೋಂಕು ಇಲ್ಲದ ಗರ್ಭಿಣಿಯರಿಗೆ, ಹೆಚ್ಚು ತೊಂದರೆ ಆಗುವ ಸಂದರ್ಭವೂ ಸೃಷ್ಟಿಯಾಗುವ ಸಾಧ್ಯತೆ ಇದೆ.

Last Updated : Jul 22, 2020, 4:47 PM IST

ABOUT THE AUTHOR

...view details