ಬೆಂಗಳೂರು: ಮನುಷ್ಯ ಹುಟ್ಟು-ಸಾವಿನ ಮಧ್ಯೆ ಏನು ಸಾಧನೆ ಮಾಡಿದ್ದಾನೆ ಎಂಬುದು ಆತನ ಜೀವನ ಹಾದಿಯನ್ನು ತೋರಿಸುತ್ತದೆ ಎಂದು ಸಚಿವ ಡಿ ಕೆ ಶಿವಕುಮಾರ್ ಅಭಿಪ್ರಾಯ ಪಟ್ಟರು.
ಮಾಜಿ ಸಚಿವ ರೆಹಮಾನ್ ಖಾನ್ ಜೀವನ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮ.. ಮಾಜಿ ಸಚಿವ ರೆಹಮಾನ್ ಖಾನ್ ಅವರ ಕಾಫಿ ಟೇಬಲ್ ಪುಸ್ತಕ ಹಾಗೂ ಮೈ ಮೆಮೊರೀಸ್ ಹೆಸರಿನ ಕೃತಿಗಳ ಬಿಡುಗಡೆ ಸಮಾರಂಭ, ಸೇವಾ ಸಮ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜಕೀಯದಲ್ಲಿ ಉನ್ನತ ಸ್ಥಾನ ಅಲಂಕರಿಸಿದ ಗೌರವ ಖಾನ್ ಅವರು ಹೊಂದಿದ್ದಾರೆ ಎಂದರು.
ಖಾನ್ ಎಂದೂ ಚೌಕಟ್ಟು ಮೀರಿ ಹೋದವರಲ್ಲ. ದೇಶದ ಐಕ್ಯತೆ, ಸಮಗ್ರತೆಯ ಬಗ್ಗೆ ಬದ್ಧತೆ ಉಳ್ಳವರಾಗಿದ್ದರು. ಅವರ ಬದುಕು ಸಾರ್ಥಕ ಎಂದರು.ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಸೇವಾ ಸಮ್ಮಾನ ಹೆಸರಿನಲ್ಲಿ ಅರ್ಹರಿಗೆ ಗೌರವ ಸಲ್ಲಿಸಲಾಗಿದೆ. ಖಾನ್ ಅವರು ರಾಜ್ಯದಲ್ಲಿ ಮೊದಲ ಮುಸ್ಲಿಂ ಚಾರ್ಟ್ಟೆಡ್ ಅಕೌಂಟೆಂಟ್ ಅನ್ನುವುದು ಗೊತ್ತಿರಲಿಲ್ಲ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಉತ್ತಮ ಹೆಸರು ಸಂಪಾದಿಸಿದ್ದಾರೆ. ರೆಹಮಾನ್ ಖಾನ್ ಅವರು ರಾಜ್ಯಸಭೆಯಿಂದ ನಿವೃತ್ತಿ ಆಗಿದ್ದಾರೆ. ಒಂದು ಸಮುದಾಯದ ನಾಯಕರಲ್ಲ, ರಾಜ್ಯಕ್ಕೆ ಉತ್ತಮ ಕೊಡುಗೆ ನೀಡಿ ರಾಜ್ಯದ ಮಾದರಿ ವ್ಯಕ್ತಿ ಎಂದರು.
ಸಮಾರಂಭದಲ್ಲಿ ಸಚಿವ ಯು ಟಿ ಖಾದರ್, ಜಮೀರ್ ಅಹ್ಮದ್, ಸಂಸದ ರಾಜೀವ್‌ಗೌಡ, ಮಾಜಿ ಸಿಎಂ ಡಾ. ಎಂ ವೀರಪ್ಪ ಮೊಯ್ಲಿ, ಮಾಜಿ ಸಚಿವ ಹೆಚ್ ಕೆ ಪಾಟೀಲ್, ಶಾಸಕ ಎನ್.ಎ. ಹ್ಯಾರಿಸ್, ರೋಷನ್ ಬೇಗ್, ತನ್ವೀರ್ ಸೇಠ್ ಮುಖಂಡರಾದ ನಜೀರ್ ಅಹ್ಮದ್, ನಾರಾಯಣ ಗೌಡ ಮತ್ತಿತರರು ಇದ್ದರು.