ಬೆಂಗಳೂರು;ದೆಹಲಿಗೆ ಭೇಟಿ ನೀಡಿದ್ದ ಕರ್ನಾಟಕದ ಮಾಜಿ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ರವರು ದೆಹಲಿ ಶಾಲೆಗಳ ಗುಣಮಟ್ಟವನ್ನು ನೋಡಿ ಸಂತೋಷ ಸಹಿತ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ ಕ್ಷೇತ್ರಕ್ಕೆ ಅರವಿಂದ ಕೇಜ್ರಿವಾಲ್ ರಿಂದ ಮೌಲ್ಯಯುತ ಕೆಲಸ; ರಮೇಶ್ ಕುಮಾರ್ - ದೆಹಲಿ ಮುಖ್ಯಮಂತ್ರಿ
ಕೆಳವರ್ಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವ ಭಾರತದ ಶಿಕ್ಷಣ ವ್ಯವಸ್ಥೆಯ ಬಿಕ್ಕಟ್ಟನ್ನು ಬಗೆಹರಿಸಲು ಕೇವಲ ಶಿಕ್ಷಕರಿಂದ ಸಾಧ್ಯವಿಲ್ಲ. ಉತ್ತಮ ತರಬೇತಿ ಪಡೆದ ಶಿಕ್ಷಕರ ಜೊತೆಗೆ ದೂರದೃಷ್ಟಿಯುಳ್ಳ ಅಧಿಕಾರಿಗಳು, ರಾಜಕಾರಣಿಗಳು ಮತ್ತು ಸರ್ಕಾರವೂ ಕೈಜೋಡಿಸಬೇಕು. ಅಂತಹ ಮೌಲ್ಯಯುತವಾದ ಕೆಲಸವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಾಡಿದ್ದಾರೆ ಎಂದು ಮಾಜಿ ವಿಧಾನ ಸಭಾಧ್ಯಕ್ಷ ರಮೇಶ್ ಕುಮಾರ್ ಹೇಳಿದ್ದಾರೆ.
ಕೆಳವರ್ಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವ ಭಾರತದ ಶಿಕ್ಷಣ ವ್ಯವಸ್ಥೆಯ ಬಿಕ್ಕಟ್ಟನ್ನು ಬಗೆಹರಿಸಲು ಕೇವಲ ಶಿಕ್ಷಕರಿಂದ ಸಾಧ್ಯವಿಲ್ಲ. ಉತ್ತಮ ತರಬೇತಿ ಪಡೆದ ಶಿಕ್ಷಕರ ಜೊತೆಗೆ ದೂರದೃಷ್ಟಿಯುಳ್ಳ ಅಧಿಕಾರಿಗಳು, ರಾಜಕಾರಣಿಗಳು ಮತ್ತು ಸರ್ಕಾರವೂ ಕೈಜೋಡಿಸಬೇಕು. ಅಂತಹ ಮೌಲ್ಯಯುತವಾದ ಕೆಲಸವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶಿಕ್ಷಣವನ್ನು ವ್ಯಾಪಾರ ಮಾಡುತ್ತಿರುವ ಸಂದರ್ಭದಲ್ಲಿ ಕೆಳ ವರ್ಗದ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಅತ್ಯುತ್ತಮವಾದ ಶಿಕ್ಷಣವನ್ನು ಕೊಡುವ ಮೌನ ಕ್ರಾಂತಿಯನ್ನೇ ಮಾಡಿದ್ದಾರೆ. ಅರವಿಂದ ಕೇಜ್ರಿವಾಲರ ಕಾರ್ಯದಕ್ಷತೆಯನ್ನು ನೋಡಿ ನಾನು ನಿಜವಾಗಿಯೂ ಚಕಿತಗೊಂಡಿದ್ದೇನೆ ಎಂದಿದ್ದಾರೆ.
ದೇಶದ ಎಲ್ಲಾ ಜನವರ್ಗಗಳ ಕೈಗೆಟಕುವಂತಹ, ಸರ್ಕಾರವೇ ಜಾರಿಗೆ ತರುವ ಗುಣಮಟ್ಟದ ಸರ್ಕಾರಿ ಶಾಲಾ ಶಿಕ್ಷಣದಿಂದ ಮಾತ್ರ ದೇಶವು ಬಡತನ ಮತ್ತು ಸಾಮಾಜಿಕ ದಾರಿದ್ರ್ಯಗಳಿಂದ ಬಿಡಿಸಿಕೊಂಡು ಮೇಲೇಳಲು ಸಾಧ್ಯ. ಅಂತಹ ಅದ್ಭುತವಾದ ಸಾಧನೆಯನ್ನು ದೆಹಲಿಯ ಕೇಜ್ರಿವಾಲ್ ಅವರ ಸರ್ಕಾರ ಮಾಡಿದೆ. ಇಡೀ ದೇಶವು ಇವರ ಮಾರ್ಗವನ್ನು ಅನುಸರಿಸಿದರೆ ದೇಶಕ್ಕೆ ಒಳ್ಳೆಯ ಭವಿಷ್ಯವಿದೆ, ದೇಶವು ಮುಂಚೂಣಿ ರಾಷ್ಟ್ರವಾಗಿ ಬೆಳೆಯಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ .