ಕರ್ನಾಟಕ

karnataka

ETV Bharat / state

ಶ್ರೀರಾಮುಲುಗೆ ಡಿಸಿಎಂ, ರಾಜುಗೌಡಗೆ ಸಚಿವ ಸ್ಥಾನಕ್ಕೆ ಆಗ್ರಹ: ಬೆಂಬಲಿಗರಿಂದ‌ ಪ್ರತಿಭಟನೆ - valmiki community

ವಾಲ್ಮೀಕಿ ಸಮುದಾಯದ ನಾಯಕರಾದ ರಾಜುಗೌಡಗೆ ಸಚಿವ ಸ್ಥಾನ ಹಾಗೂ ಶ್ರೀರಾಮುಲುಗೆ ಡಿಸಿಎಂ ಸ್ಥಾನ ನೀಡಬೇಕೆಂದು ರಾಜ್ಯ ಬಿಜೆಪಿ ಕೇಂದ್ರ ಕಚೇರಿ ಎದುರು ಬೆಂಬಲಿಗರು ಪ್ರತಿಭಟನೆ ನಡೆಸಿದರು.

ಬಿಜೆಪಿ ಕಚೇರಿ ಎದುರು ವಾಲ್ಮೀಕಿ ಸಮುದಾಯದವರ ಪ್ರತಿಭಟನೆ

By

Published : Aug 29, 2019, 3:18 PM IST

ಬೆಂಗಳೂರು: ವಾಲ್ಮೀಕಿ ಸಮುದಾಯದ ನಾಯಕರಾದ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು, ರಾಜುಗೌಡರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಕಚೇರಿ ಎದುರು ಶ್ರೀರಾಮುಲು ಹಾಗೂ ರಾಜುಗೌಡ ಬೆಂಬಲಿಗರು ಪ್ರತಿಭಟ‌ನೆ ನಡೆಸಿದರು.

ಬಿಜೆಪಿ ಕಚೇರಿ ಎದುರು ವಾಲ್ಮೀಕಿ ಸಮುದಾಯದವರ ಪ್ರತಿಭಟನೆ

ಇಲ್ಲಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕೇಂದ್ರ ಕಚೇರಿ ಎದುರು ನಾಯಕರ ಪರ ಘೋಷಣೆ ಕೂಗಿ, ಚುನಾವಣೆಗೂ ಮುನ್ನ ಬಿಜೆಪಿ ನಾಯಕರು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಬಿಜೆಪಿ ಪರ ನಿಂತಿರುವ ವಾಲ್ಮೀಕಿ ಸಮುದಾಯಕ್ಕೆ ಸಂಪುಟದಲ್ಲಿ ಡಿಸಿಎಂ ಸೇರಿದಂತೆ ಮೂರು ಸ್ಥಾನ ನೀಡಬೇಕೆಂದು ಆಗ್ರಹಿಸಿದ್ರು.ಬೆಂಬಲಿಗರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕುವ ಯತ್ನವೂ ನಡೆಯಿತು.

ವಾಲ್ಮೀಕಿ ‌ಸಮುದಾಯ ಬಿಜೆಪಿಯನ್ನು ಬೆಂಬಲಿಸಿದೆ. ಹಾಗಾಗಿ ಶ್ರೀರಾಮುಲು ಅವರನ್ನು ಡಿಸಿಎಂ ಮಾಡಬೇಕು, ರಾಜುಗೌಡ ಅವರನ್ನು ಸಚಿವರನ್ನಾಗಿ ಮಾಡಬೇಕು. ಜೊತೆಗೆ ಮೀಸಲಾತಿ ಹೆಚ್ಚಳ ಮಾಡುವ ಭರವಸೆ ಈಡೇರಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಬೆಂಗಳೂರು ಗ್ರಾಮಾಂತರ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಮೇಶ್​ ಎಚ್ಚರಿಕೆ ರವಾನಿಸಿದ್ದಾರೆ.

ನಿಮ್ಮ ಮನವಿಯನ್ನು ನಾಯಕರ ಗಮನಕ್ಕೆ ತರಲಾಗುತ್ತದೆ. ಪ್ರತಿಭಟನೆ ಕೈಬಿಡುವಂತೆ ಕಾರ್ಯಾಲಯ ಕಾರ್ಯದರ್ಶಿ ಗಣೇಶ್ ಮನವಿ ಮಾಡಿದರು.

ABOUT THE AUTHOR

...view details