ಬೆಂಗಳೂರು:ಕೊರೊನಾ ಎರಡನೇ ಅಲೆಯ ಆತಂಕ ದಿನೇ ದಿನೆ ಹೆಚ್ಚಾಗುತ್ತಿದ್ದು, ವರ್ಷಾರಂಭದಿಂದ ಎಲ್ಲಾ ಹಬ್ಬಗಳಿಗೂ ಬ್ರೇಕ್ ಬಿದ್ದಿದೆ. ಇದೀಗ ವೈಕುಂಠ ಏಕಾದಶಿ ಆಚರಣೆಗೂ ಅಡ್ಡಿಯುಂಟಾಗಿದ್ದು, ವೈಕುಂಠ ಏಕಾದಶಿ ಆಚರಣೆಗೆ ಬ್ರೇಕ್ ಹಾಕಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಶಿವಮೂರ್ತಿ ಆದೇಶ ಹೊರಡಿಸಿದ್ದಾರೆ.
ವೈಕುಂಠ ಏಕಾದಶಿ ಆಚರಣೆಗೆ ಬ್ರೇಕ್ ಹಾಕಿದ ಬೆಂಗಳೂರು ನಗರ ಜಿಲ್ಲಾಧಿಕಾರಿ - ವೈಕುಂಠ ಏಕಾದಶಿ ಆಚರಣೆ ಸುದ್ದಿ
ಕೋಟೆ ಶ್ರೀ ಪ್ರಸನ್ನ ವೆಂಕಟರಮಣ ದೇಗುಲದಲ್ಲಿ ಈ ಬಾರಿ ವೈಕುಂಟ ಏಕಾದಶಿಯಂದು ದೇವರ ದರ್ಶನಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ.
ಕೋಟೆ ಶ್ರೀ ಪ್ರಸನ್ನ ವೆಂಕಟರಮಣ ದೇಗುಲದಲ್ಲಿ ಈ ಬಾರಿ ವೈಕುಂಟ ಏಕಾದಶಿಯಂದು ದೇವರ ದರ್ಶನಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಇದೇ ಡಿಸೆಂಬರ್ 25ಕ್ಕೆ ವೈಕುಂಠ ಏಕಾದಶಿ ಆಚರಣೆಯಿದ್ದು, ನಗರದ ದೇವಸ್ಥಾನಗಳಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತೆ. ಆದ್ರೆ ಈ ಬಾರಿ ಕೊರೊನಾ ಕಾರಣದಿಂದಾಗಿ ವೈಕುಂಠ ಏಕಾದಶಿ ದಿನ ನಡೆಯುವ ಕಾರ್ಯಕ್ರಮಗಳು ಅರ್ಚಕರ ನೇತೃತ್ವದಲ್ಲಿ ಮಾತ್ರ ನಡೆಯಬೇಕೆಂದು ತಿಳಿಸಲಾಗಿದ್ದು, ಬೆಂಗಳೂರಿನ ಕಲಾಸಿಪಾಳ್ಯದ ಕೆ.ಆರ್. ರಸ್ತೆಯಲ್ಲಿರುವ ಕೋಟೆ ಶ್ರೀ ಪ್ರಸನ್ನ ವೆಂಕಟರಮಣ ದೇವಾಲಯದಲ್ಲಿ ಕೊರೊನಾ ಹರಡುವಿಕೆ ತಡೆಯಲು ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ.