ಬೆಂಗಳೂರು:ವಾಲ್ಮೀಕಿ ಸ್ವಾಮೀಜಿಯವರಂತೆ ನಾವು ತಾಳ್ಮೆಯಿಂದ ಮೀಸಲಾತಿ ಪಡೆದೇ ಪಡೆಯುತ್ತೇವೆ ಎಂದು ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬೊಮ್ಮಾಯಿ ಭೇಟಿ ಬಳಿಕ ಮಾತನಾಡಿದ ಅವರು, ಕಳೆದ 28 ವರ್ಷಗಳಿಂದ ವೀರಶೈವ ಪಂಚಮಸಾಲಿ ಮೀಸಲಾತಿಗಾಗಿ ಹೋರಾಟ ಮಾಡಲಾಗುತ್ತಿದೆ. ಈ ಸಂಬಂಧ ಹಿಂದುಳಿದ ವರ್ಗಗಳ ಆಯೋಗ ಸಮೀಕ್ಷೆ ನಡೆಸುತ್ತಿದೆ. ಆ ವರದಿಯನ್ನು ತಕ್ಷಣ ತರಿಸಿ ಹೇಗೆ ಕ್ಲಿಷ್ಟಕರ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಸಿ ಸಮಸ್ಯೆ ಬಗೆಹರಿಸಿತೋ ಮುಂದಿನ ಹೆಜ್ಜೆಯಾಗಿ ಪಂಚಮಸಾಲಿ ಸಮುದಾಯಕ್ಕೆ ಕೂಡ ಸಿಎಂ ಬೊಮ್ಮಾಯಿ ಬದ್ಧತೆಯೊಂದಿಗೆ ಸಂಪೂರ್ಣ ಭದ್ರತೆಯನ್ನು ಕೊಡುತ್ತಾರೆ ಎಂಬ ವಿಶ್ವಾಸ ಇದೆ ಎಂದರು.