ಕರ್ನಾಟಕ

karnataka

ETV Bharat / state

ವಚನಾನಂದ ಶ್ರೀಗಳಿಗೆ ಆಯೋಗ ಆಹ್ವಾನ ನೀಡಿಲ್ಲ: ವಿಜಯಾನಂದ ಕಾಶಪ್ಪನವರ್ - ಪಂಚಮಸಾಲಿ ಸಮುದಾಯ

ಪಂಚಮಸಾಲಿ ಸಮುದಾಯದ 62 ದಿನಗಳ ನಮ್ಮ ಹೋರಾಟಕ್ಕೆ ಸರ್ಕಾರ ಸ್ಪಂದಿಸಿ, ಆರು ತಿಂಗಳ ಕಾಲಾವಕಾಶ ಕೇಳಿದ್ದು, ವರದಿ ಬಂದ ಮೇಲೆ ಬೇಡಿಕೆ ಈಡೇರಿಸುವ ಭರವಸೆ ನೀಡಿದೆ. ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ನೇತೃತ್ವದಲ್ಲಿ ಸದನದಲ್ಲಿ ನಡೆದ ಹೋರಾಟಕ್ಕೆ ಸರ್ಕಾರ ಸ್ಪಂದಿಸಿದೆ. ಸೆಪ್ಟಂಬರ್ 15 ಕ್ಕೆ ಮೀಸಲಾತಿ ನೀಡದಿದ್ದರೆ 20 ಲಕ್ಷ ಜನರನ್ನು ಸೇರಿಸಿ ಬೃಹತ್ ಸಮಾವೇಶ ನಡೆಸಲಾಗುವುದು ಎಂದು ವಿಜಯಾನಂದ ಕಾಶಪ್ಪನವರ್ ಹೇಳಿದ್ದಾರೆ.

Vijayananda Kashappanavar
ವಿಜಯಾನಂದ ಕಾಶಪ್ಪನವರ್

By

Published : Mar 17, 2021, 12:51 PM IST

ಬೆಂಗಳೂರು: ಕೂಡಲ ಸಂಗಮದ ಬಸವ ಜಯಮೃತ್ಯಂಜಯ ಶ್ರೀಗಳ ಜೊತೆ ಬೇರೆ ಶ್ರೀಗಳಿಗೂ ಹಿಂದುಳಿದ ವರ್ಗದ ಆಯೋಗ ಹಾಜರಾಗುವಂತೆ ಸೂಚನೆ ನೀಡಿದೆ ಎನ್ನುವುದು ತಪ್ಪು ಮಾಹಿತಿಯಾಗಿದೆ‌ ಎಂದು ಅಖಿಲ ಭಾರತ ಪಂಚಮಸಾಲಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಸ್ಪಷ್ಟಪಡಿಸಿದ್ದಾರೆ.

ಖಾಸಗಿ ಹೋಟೆಲ್​ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾರ್ಚ್ 22 ರಂದು ಹಿಂದುಳಿದ ವರ್ಗಗಳ ಆಯೋಗದ ಮುಂದೆ ಹಾಜರಾಗಿ ನಮ್ಮ ದಾಖಲೆಗಳನ್ನು ಸಲ್ಲಿಸುತ್ತೇವೆ. ವಿಚಾರಣೆ ಹಾಜರಾಗಲು ನನಗೆ ಹಾಗೂ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳಿಗೆ ಮಾತ್ರ ಅವಕಾಶವಿದೆ. ಬೇರೆಯವರಿಗೂ ಹಾಜರಾಗಲು ಅವಕಾಶ ನೀಡಲಾಗಿದೆ ಎಂಬ ತಪ್ಪು ಮಾಹಿತಿ ನೀಡಲಾಗುತ್ತದೆ ಎಂಬ ವಿಷಯವನ್ನು ಅವರು ಇದೇ ವೇಳೆ ಗಮನಕ್ಕೆ ತಂದರು.

ವಿಜಯಾನಂದ ಕಾಶಪ್ಪನವರ್

ಪಂಚಮಸಾಲಿ ಸಮುದಾಯದ 62 ದಿನಗಳ ನಮ್ಮ ಹೋರಾಟಕ್ಕೆ ಸರ್ಕಾರ ಸ್ಪಂದಿಸಿ ಆರು ತಿಂಗಳ ಭರವಸೆ ನೀಡಿದೆ. ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ನೇತೃತ್ವದಲ್ಲಿ ಸದನದಲ್ಲಿ ನಡೆದ ಹೋರಾಟಕ್ಕೆ ಸರ್ಕಾರ ಸ್ಪಂದಿಸಿದೆ. ಸೆಪ್ಟಂಬರ್ 15 ಕ್ಕೆ ಮೀಸಲಾತಿ ನೀಡದಿದ್ದರೆ 20 ಲಕ್ಷ ಜನರನ್ನು ಸೇರಿಸಿ ಬೃಹತ್ ಸಮಾವೇಶ ನಡೆಸಲಾಗುವುದು. ಈ ಹೋರಾಟ ಯಶಸ್ವಿಯಾಗಲು ಸಹಕಾರ ನೀಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಿ.ಸಿ ಪಾಟೀಲ್, ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಧನ್ಯವಾದ ಅರ್ಪಿಸಲಾಗುವುದು ಎಂದರು.

ನಮ್ಮ ಹೋರಾಟವನ್ನು ಸ್ಥಗಿತಗೊಳಿಸಲು ನಮ್ಮವರೇ ಸಾಕಷ್ಟು ಪ್ರಯತ್ನ ನಡೆಸಿದರು. ಆದರೆ, ಜನರ ಬೆಂಬಲ ಇದ್ದದ್ದರಿಂದ ಅದು ಯಶಸ್ವಿಯಾಗಲಿಲ್ಲ. ಕೆಲವರು ಸೂಟು - ಬೂಟು ಹಾಕಿಕೊಂಡು ಬಂದರು, ಸೂಟು ಬೂಟು ಹಾಕಿಕೊಂಡು ಹೋದರು. ಅವರು ಹಾಗೆ ಬರುವುದು ಹೋಗುವುದು ಮಾಡುತ್ತಾರೆ. ಸಮಾಜದ ಪರವಾಗಿ ಯಾರು ನಿಲ್ಲುತ್ತಾರೆ ಎನ್ನುವುದು ಇದರಿಂದ ಗೊತ್ತಾಗುತ್ತದೆ ಎಂದರು.

ವಚನಾನಂದ ಶ್ರೀ ಸೆಲೆಬ್ರಿಟಿ ಆಗಿದ್ದಾರೆ ಅದಕ್ಕೆ ಧರಣಿಗೆ ಬರಲಿಲ್ಲ:ಹರಿಹರ ಪೀಠದ ಸ್ವಾಮೀಜಿ ಅವರು ಸೆಲೆಬ್ರಿಟಿ ಆಗಿದ್ದಾರೆ. ಹೀಗಾಗಿ ಅವರು ಮಧ್ಯ ಬಂದರು ಮತ್ತೆ ವಾಪಸ್ ಹೋದರು. ಈಗ ಮತ್ತೆ ಬರಬಹುದು. ಬಂದಾಗ ಕರೆದುಕೊಂಡೆವು. ಹೋದಾಗ ಕಳುಹಿಸಿ ಕೊಟ್ಟಿದ್ದೇವೆ. ಮತ್ತೆ ಬಂದರೆ ಸೇರಿಸಿಕೊಳ್ಳುತ್ತೇವೆ. ಈ ಪಾದಯಾತ್ರೆಯಿಂದ ನಮ್ಮ ಆತ್ಮ ವಿಶ್ವಾಸ ಹೆಚ್ಚಾಗಿದೆ. ದೆಹಲಿವರೆಗೂ ಪಾದಯಾತ್ರೆ ಮಾಡುವಷ್ಟು ವಿಶ್ವಾಸ ಹೆಚ್ಚಾಗಿದೆ ಎಂದು‌ ಬಸವ ಜಯಮೃತ್ಯಂಜಯ ಶ್ರೀಗಳು ಹೇಳಿದರು.

ABOUT THE AUTHOR

...view details