ಕರ್ನಾಟಕ

karnataka

ETV Bharat / state

ದಿವ್ಯಾಂಗರಿಗೆ ಆದ್ಯತೆ ಮೇರೆಗೆ ಕೋವಿಡ್ ಲಸಿಕೆ: ಸರ್ಕಾರದ ನಿಲುವು ಕೇಳಿದ ಹೈಕೋರ್ಟ್ - ಬೆಂಗಳೂರು ಸುದ್ದಿ

ಅಂಗ ವೈಕಲ್ಯ ಅನುಭವಿಸುವ ವ್ಯಕ್ತಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಥವಾ ಮತ್ತೊಬ್ಬರನ್ನು ಮುಟ್ಟದೆ ಇರುವುದು ಕಷ್ಟ. ಮಾಸ್ಕ್ ಹಾಕಿಕೊಳ್ಳಲು ಸಹ ಕಷ್ಟ ಇರುತ್ತದೆ. ಇಂತಹವರು ಅತೀ ಹೆಚ್ಚು ಕೋವಿಡ್ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ.

ಹೈಕೋರ್ಟ್
ಹೈಕೋರ್ಟ್

By

Published : Apr 24, 2021, 9:09 PM IST

ಬೆಂಗಳೂರು: ರಾಜ್ಯದಲ್ಲಿ ದಿವ್ಯಾಂಗರಿಗೆ ಆದ್ಯತೆ ಮೇರೆಗೆ ಕೋವಿಡ್ ಲಸಿಕೆ ನೀಡುವ ಕುರಿತು ಸೋಮವಾರದೊಳಗೆ ಸ್ಪಷ್ಟ ನಿಲುವು ತಿಳಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಈ ಕುರಿತು ಕರ್ನಾಟಕ ವಿಕಲಚೇತನರ ರಕ್ಷಣಾ ಸಮಿತಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. ಅರ್ಜಿಯನ್ನು ತುರ್ತಾಗಿ ಪರಿಗಣಿಸಬೇಕಿದ್ದು, ಸೋಮವಾರವೇ ವಿಚಾರಣೆ ನಡೆಸಲಾಗುವುದು. ಅಷ್ಟರೊಳಗೆ ವಿಶೇಷ ಚೇತನರಿಗೆ ಆದ್ಯತೆ ಮೇರೆಗೆ ಕೋವಿಡ್ ಲಸಿಕೆ ನೀಡುವ ಕುರಿತು ರಾಜ್ಯ ಸರ್ಕಾರ ಸ್ಪಷ್ಟ ನಿಲುವು ತಿಳಿಸಬೇಕು ಎಂದು ಸೂಚಿಸಿದೆ.

ಅರ್ಜಿದಾರರ ಕೋರಿಕೆ

ಅಂಗ ವೈಕಲ್ಯ ಅನುಭವಿಸುವ ವ್ಯಕ್ತಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಥವಾ ಮತ್ತೊಬ್ಬರನ್ನು ಮುಟ್ಟದೆ ಇರುವುದು ಕಷ್ಟ. ಮಾಸ್ಕ್ ಹಾಕಿಕೊಳ್ಳಲು ಸಹ ಕಷ್ಟ ಇರುತ್ತದೆ. ಇಂತಹವರು ಅತೀ ಹೆಚ್ಚು ಕೋವಿಡ್ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ. ಇವರನ್ನು ಸುರಕ್ಷಿತವಾಗಿರಿಸಲು ಲಸಿಕೆ ನೀಡುವುದು ಒಂದೇ ದಾರಿಯಾಗಿದೆ. ಆದ್ದರಿಂದ ವಿಶೇಷ ಚೇತನರು ಮತ್ತು ಅವರ ಯೋಗಕ್ಷೇಮ ನೋಡಿಕೊಳ್ಳುವ ವ್ಯಕ್ತಿಗಳಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು.

18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಏಪ್ರಿಲ್ 28ರಿಂದ ನೋಂದಣಿ ಆರಂಭವಾಗುತ್ತಿದೆ. ಅದಕ್ಕೂ ಮೊದಲೇ ಈ ಸಂಬಂಧ ನ್ಯಾಯಾಲಯ ಸೂಕ್ತ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ABOUT THE AUTHOR

...view details