ಬೆಂಗಳೂರು: ಕೋವಿಡ್ ಲಸಿಕೆ ನೀಡಲು ನಿರ್ಧರಿಸಿರುವ ಬೆನ್ನಲ್ಲೇ ರಾಜ್ಯದಲ್ಲಿ ವಿತರಣೆಗೆ ಅಗತ್ಯವಾದ ಪೂರ್ವ ಸಿದ್ಧತೆ ನಡೆಯುತ್ತಿದೆ. ಪ್ರಥಮ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತದೆ.
ಯಶಸ್ವಿ ಅನುಷ್ಠಾನಕ್ಕಾಗಿ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕೇಂದ್ರಗಳ ಆರೋಗ್ಯ ಕಾರ್ಯಕರ್ತರ ಮಾಹಿತಿಯನ್ನು ನೋಂದಣಿ ಮಾಡಲಾಗಿದೆ. ರಾಜ್ಯದ 5 ಜಿಲ್ಲೆಗಳಾದ ಬೆಂಗಳೂರು, (ಬಿಬಿಎಂಪಿ ಒಳಗೊಂಡಂತೆ), ಬೆಳಗಾವಿ, ಮೈಸೂರು, ಕಲಬುರಗಿ ಮತ್ತು ಶಿವಮೊಗ್ಗದಲ್ಲಿ ಡ್ರೈ ರನ್ ಕಾರ್ಯಕ್ರಮವನ್ನು ಭಾರತ ಸರ್ಕಾರದ ಮಾರ್ಗಸೂಚಿಯಂತೆ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.
ಇದೇ ತರನಾಗಿ ಜನವರಿ 08ರಂದು ರಾಜ್ಯದ ಎಲ್ಲಾ ಜಿಲ್ಲೆಯ ಆರೋಗ್ಯ ಕೇಂದ್ರಗಳಲ್ಲಿ ಡ್ರೈ ರನ್ ಅನ್ನು ಹಮ್ಮಿಕೊಳ್ಳಲಾಗುತ್ತದೆ.
ಎಲ್ಲೆಲ್ಲಿ ಡ್ರೈರನ್ ?
1. ಜಿಲ್ಲಾ ಆಸ್ಪತ್ರೆ/ ವೈದ್ಯಕೀಯ ಮಹಾವಿದ್ಯಾಲಯಗಳ ಆಸ್ಪತ್ರೆ
2. ತಾಲೂಕು ಆಸ್ಪತ್ರೆ
3. ಸಮುದಾಯ ಆರೋಗ್ಯ ಕೇಂದ್ರ
4. ನಗರ ಪ್ರಾಥಮಿಕ ಆರೋಗ್ಯ ಕೇಂದ್ರ/ ಪ್ರಾಥಮಿಕ ಆರೋಗ್ಯ ಕೇಂದ್ರ
5. ಖಾಸಗಿ ವೈದ್ಯಕೀಯ ಕಾಲೇಜು /100ಕ್ಕಿಂತ ಹೆಚ್ಚು ಫಲಾನುಭವಿಗಳನ್ನು ಹೊಂದಿರುವ ಖಾಸಗಿ ಆಸ್ಪತ್ರೆ
ಡ್ರೈ ರನ್ ಚಟುವಟಿಕೆಯು ವಾಸ್ತವಿಕ ಕೋವಿಡ್-19 ಲಸಿಕಾಕರಣವನ್ನು ಹೊರತುಪಡಿಸಿ ಪ್ರಾರಂಭದಿಂದ ಅಂತ್ಯದವರೆಗಿನ ಉಳಿದ ಎಲ್ಲಾ ಪ್ರಕ್ರಿಯೆಗಳನ್ನು ಪರೀಕ್ಷಿಸುತ್ತದೆ ಮತ್ತು ಈ ಕೆಳಕಂಡ ಅಂಶಗಳನ್ನು ಒಳಗೊಂಡಿರುತ್ತದೆ.
* ಕೊವಿಡ್-19 ಲಸಿಕೆ ಪರಿಚಯಕ್ಕಾಗಿ ಲಸಿಕಾಕರಣದ ಕಾರ್ಯಾಚರಣೆಯ ಮಾರ್ಗಸೂಚಿಯ ಅನುಸಾರ ಇರುವ ಪೂರ್ವಪೇಕ್ಷಿತಗಳು ಮತ್ತು ಕೋವಿಡ್ ಪೋರ್ಟಲ್ನ ಉಪಯೋಗಗಳನ್ನು ಯೋಜನೆ ಮತ್ತು ಸಿದ್ಧತೆಗಳು ಒಳಗೊಂಡಿರುವುದು.
* ಫಲಾನುಭವಿಗಳು ಮತ್ತು ಲಸಿಕಾ ಮಾಹಿತಿಯನ್ನು ಇಂದೀಕರಿಸುವುದು.
* ಲಸಿಕಾ ದಾಖಲೆಗಳನ್ನು ಪರಿಶೀಲಿಸುವುದು.
ಇದನ್ನೂ ಓದಿ:ನಕಲಿ 'CoWIN' ಅಪ್ಲಿಕೇಶನ್‌ಗಳ ಬಗ್ಗೆ ಕೇಂದ್ರ ಸರ್ಕಾರದ ಎಚ್ಚರಿಕೆ