ಬೆಂಗಳೂರು: ರಾಜ್ಯದ 5 ಜಿಲ್ಲೆಗಳಲ್ಲಿ ಕೋವಿಡ್ ವ್ಯಾಕ್ಸಿನ್ ಡ್ರೈ ರನ್ ನಡೆಸಲಾಗಿದ್ದು, ಇಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್, ಯಲಹಂಕ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದರು.
ಜನವರಿಯಲ್ಲೇ ಲಸಿಕೆ ಬರುವ ಸಾಧ್ಯತೆ ಇದೆ: ಸಚಿವ ಸುಧಾಕರ್ ಬಳಿಕ ಮಾತನಾಡಿದ ಅವರು, ಇಂದು ರಾಜ್ಯದ 5 ಜಿಲ್ಲೆಗಳಲ್ಲಿ ಅಣುಕು ಪ್ರದರ್ಶನ ನಡೆಯುತ್ತಿದೆ. ಯಲಹಂಕ ಸಾರ್ವಜನಿಕ ಆಸ್ಪತ್ರೆಯಲ್ಲಿ 25 ಆರೋಗ್ಯ ಸಿಬ್ಬಂದಿಯನ್ನು ಗುರುತಿಸಲಾಗಿದೆ. ಯಾವ ರೀತಿ ನಾವು ಅಂದಾಜು ಮಾಡಿದ್ದೇವೆ, ಅದೇ ರೀತಿಯಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಅಧಿಕೃತ ಲಸಿಕೆ ಬಂದಾಗ ಇದೇ ರೀತಿಯಲ್ಲಿ ಅನುಷ್ಠಾನ ಆಗಲಿದೆ ಎಂದರು.
ಓದಿ: 10 ಮಂದಿಯಲ್ಲಿ ರೂಪಾಂತರಿ ವೈರಸ್ ದೃಢ: ಸಚಿವ ಡಾ.ಕೆ.ಸುಧಾಕರ್
ಜನವರಿಯಲ್ಲಿಯೇ ಲಸಿಕೆ ಬರುವ ನಿರೀಕ್ಷೆ ಇದ್ದು, ಕೇಂದ್ರ ಸಚಿವರು ಹೇಳಿಕೆ ನೀಡುತ್ತಿದ್ದಾರೆ. ಆರೋಗ್ಯ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಒಂದು ಕೋಟಿ ಜನರಿಗೆ ಪ್ರಾರಂಭದಲ್ಲಿ ಉಚಿತವಾಗಿ ಕೇಂದ್ರ ಸರ್ಕಾರವೇ ಲಸಿಕೆ ನೀಡುತ್ತೆ. ರಾಜ್ಯದಲ್ಲಿ ಈಗಾಗಲೇ ಲಸಿಕೆ ನೀಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಜನವರಿಯಲ್ಲೇ ಲಸಿಕೆ ಬರುವ ಸಾಧ್ಯತೆ ಇದೆ: ಸಚಿವ ಸುಧಾಕರ್ 10 ಜನರಿಗೆ ರೂಪಾಂತರ ಕೊರೊನಾ ದೃಢ:
ರಾಜ್ಯದಲ್ಲಿ 42 ಜನರಲ್ಲಿ 32 ಮಂದಿಗೆ ಆರ್ಟಿಪಿಸಿಆರ್ ಮಾಡಿಸಲಾಗಿದ್ದು, ಈ ಟೆಸ್ಟ್‌ನಲ್ಲಿ 10 ಜನರಿಗೆ ರೂಪಾಂತರ ಕೊರೊನಾ ದೃಢಪಟ್ಟಿದೆ. ಉಳಿದ 10 ಸಂಪರ್ಕಿತರ ಸ್ಯಾಂಪಲ್ಸ್ ನೀಡಲಾಗಿದೆ. ಜನರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಪ್ರತಿನಿತ್ಯ ಕೋವಿಡ್ ಕೇಸ್ ಕಡಿಮೆ ಆಗುತ್ತಿದ್ದು, ಡಿಸ್ಜಾರ್ಜ್ ಆಗುವವರ ಸಂಖ್ಯೆ ಹೆಚ್ಚಿದೆ. ಸಕ್ರಿಯ ಕೇಸ್ ಕಡಿಮೆ ಆಗಲಿದೆ ಎಂದರು. ಇನ್ನು ಜನವರಿ 8ರಿಂದ ವಿಮಾನ ಹಾರಾಟ ಹಿನ್ನೆಲೆ ಕೇಂದ್ರ ಸರ್ಕಾರದ ತೀರ್ಮಾನ ಏನು ಎಂದು ನೋಡಿಕೊಂಡು ಕ್ರಮ ಕೈಗೊಳ್ಳಲಾಗುತ್ತೆ ಎಂದರು.