ಕರ್ನಾಟಕ

karnataka

ETV Bharat / state

BMRCLನಲ್ಲಿ ಸ್ಟೇಷನ್​ ಕಂಟ್ರೋಲರ್​, ಟ್ರೈನ್​ ಆಪರೇಟರ್​ ಹುದ್ದೆಗಳಿಗೆ ಅರ್ಜಿ ಆಹ್ವಾನ - ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ

ಎಸ್​ಎಸ್​ಎಲ್​ಸಿ ಮತ್ತು ಡಿಪ್ಲೊಮೋ ಪದವೀಧರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

Karnataka Recruitment Job vacancy in BMRCL for 10 and diploma
Karnataka Recruitment Job vacancy in BMRCL for 10 and diploma

By

Published : May 17, 2023, 1:28 PM IST

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಲ್ಲಿ (ಬಿಎಂಆರ್​​ಸಿಎಲ್​) ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಸ್ಟೇಷನ್​ ಮಾಸ್ಟರ್​​ ಮತ್ತು ಟ್ರೈನ್​ ಆಪರೇಟರ್​ ಹುದ್ದೆಗಳ ಭರ್ತಿಗೆ ಸೂಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 96 ಹುದ್ದೆಗಳಿವೆ. ನಿವೃತ್ತ ಸೇನಾ ಸಿಬ್ಬಂದಿಯೂ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಐದು ವರ್ಷದ ಒಪ್ಪಂದದ ಗುತ್ತಿಗೆ ಆಧಾರಿತ ಹುದ್ದೆ ಇದಾಗಿದೆ.

ಅಧಿಸೂಚನೆ

ಹುದ್ದೆಗಳ ವಿವರ: ಸ್ಟೇಷನ್​ ಕಂಟ್ರೋಲರ್,​ ಟ್ರೈನ್​ ಆಪರೇಟರ್​

ಅರ್ಹತೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ, ಎಲೆಕ್ಟ್ರಿಕಲ್​ ಇಂಜಿನಿಯರಿಂಗ್​, ಎಲೆಕ್ಟ್ರಿಕಲ್​ ಮತ್ತು ಎಲೆಕ್ಟ್ರಾನಿಕ್ಸ್​ ಇಂಜಿನಿಯರಿಂಗ್​, ಟೆಲಿ ಕಮ್ಯೂನಿಕೇಷನ್​, ಎಲೆಕ್ಟ್ರಾನಿಕ್ಸ್​ ಮತ್ತು ಕಮ್ಯೂನಿಕೇಷನ್​/ಎಲೆಕ್ಟ್ರಿಕಲ್​ ಪವರ್​ ಸಿಸ್ಟಂನಲ್ಲಿ ಡಿಪ್ಲೊಮಾ ಪದವಿ ಹೊಂದಿರಬೇಕು.

ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಠ 46 ವರ್ಷಗಳ ವಯೋಮಿತಿ ಮೀರಬಾರದು.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ಮನೋಬಲ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನ

ಅಭ್ಯರ್ಥಿಗಳು ಆನ್​ಲೈನ್​ ಮತ್ತು ಆಫ್‌ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಮೇ 16ರಿಂದ ಅರ್ಜಿ ಸಲ್ಲಿಕೆ ಆರಂಭ. ಮೇ 31 ಕಡೇ ದಿನ. ಮಾಸಿಕ 35000- 82660 ರೂ ವರೆಗೆ ವೇತನ ನಿಗದಿಸಲಾಗಿದೆ. ಐದು ವರ್ಷಗಳ ಹುದ್ದೆ ಅವಧಿಯಲ್ಲಿ ಪ್ರತಿ ವರ್ಷ ಶೇ 3ರಷ್ಟು ವೇತನ ಹೆಚ್ಚಳ ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಅರ್ಜಿ ಸಲ್ಲಿಕೆಗೆ ಮುನ್ನ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಸರಿಯಾಗಿ ಪರಿಶೀಲಿಸಿ, ಅಗತ್ಯ ದಾಖಲೆಗಳೊಂದಿಗೆ ನಿಗದಿತ ದಿನಾಂಕಕ್ಕೆ ಮುನ್ನ ಈ ಕೆಳಗಿನ ವಿಳಾಸಕ್ಕೆ ಆಫ್​​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ಸ್ಪೀಡ್​ ಪೋಸ್ಟ್​, ರಿಜಿಸ್ಟರ್​ ಅಥವಾ ಖುದ್ದಾಗಿಯೂ ಅರ್ಜಿ ಹಾಕಬಹುದು. ಯಾವುದೇ ಅರ್ಜಿ ಶುಲ್ಕವಿಲ್ಲ.

ಅರ್ಜಿ ಸಲ್ಲಿಕೆ ವಿಳಾಸ- ಜನರಲ್​ ಮ್ಯಾನೇಜರ್​ (ಎಚ್ಆರ್​), ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ, ಎರಡನೇ ಫ್ಲೋರ್​​, ಬಿಎಂಟಿಸಿ ಸಂಕೀರ್ಣ, ಕೆ.ಎಚ್.ರೋಡ್​​, ಶಾಂತಿನಗರ, ಬೆಂಗಳೂರು- 560027.

ಅಧಿಕೃತ ಅಧಿಸೂಚನೆ ಸೇರಿದಂತೆ ಇನ್ನಿತರ ಮಾಹಿತಿ ಪಡೆಯಲು ಬಿಎಂಆರ್​ಸಿಎಲ್ english.bmrc.co.in​ ಜಾಲತಾಣಕ್ಕೆ ಭೇಟಿ ನೀಡಿ.

ಇದನ್ನೂ ಓದಿ: ಸದ್ಯ ಕೆಲಸ ಬದಲಾಯಿಸದಿರಲು ನಿರ್ಧರಿಸಿದ ಶೇ 49ರಷ್ಟು ಉದ್ಯೋಗಿಗಳು

ABOUT THE AUTHOR

...view details