ಕರ್ನಾಟಕ

karnataka

ETV Bharat / state

Govt Jobs: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಖಾಲಿ ಇದೆ ಸಮಾಲೋಚಕರ ಹುದ್ದೆ - ನೇಮಕಾತಿಗೆ ಅಧಿಕೃತ ಅಧಿಸೂಚನೆ

ಇಲಾಖೆಯಲ್ಲಿರುವ ಇಂಟಿಗ್ರೇಡೆಟ್​​​ ಜಲ ಸಂಪನ್ಮೂಲ ನಿರ್ವಹಣಾ ಸಮಾಲೋಚಕರ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

vacancy for Consultant in Rural Drinking Water and Sanitation Department
vacancy for Consultant in Rural Drinking Water and Sanitation Department

By

Published : Jun 23, 2023, 1:37 PM IST

ಕರ್ನಾಟಕ ರಾಜ್ಯ ಸರ್ಕಾರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲ ಜೀವನ ಮಿಷನ್​ ಯೋಜನೆ ಅಡಿ ವಿವಿಧ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಇಲಾಖೆಯಲ್ಲಿರುವ ಇಂಟಿಗ್ರೇಡೆಟ್​​​ ಜಲ ಸಂಪನ್ಮೂಲ ನಿರ್ವಹಣಾ ಸಮಾಲೋಚಕರ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಯುನಿಸೆಫ್​ ಸಂಸ್ಥೆ ವತಿಯಿಂದ ರಾಜ್ಯ ಕಚೇರಿಗೆ ಈ ಹುದ್ದೆ ನೇಮಕಾತಿ ನಡೆಯಲಿದ್ದು, ಇದು ಸಂಪೂರ್ಣ ಗುತ್ತಿಗೆ ಆಧಾರಿತ ಹುದ್ದೆಯಾಗಿದೆ. ಈ ಹುದ್ದೆಯಲ್ಲಿ ಈಗಾಗಲೇ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ಹುದ್ದೆ ವಿವರ: ಇಂಟಿಗ್ರೇಡೆಟ್​ ಜಲ ಸಂಪನ್ಮೂಲ ನಿರ್ವಹಣಾ ಸಮಾಲೋಚಕರ ಹುದ್ದೆ ಇದಾಗಿದೆ.

ಪ್ರಮುಖ ಅರ್ಹತೆ:

  • ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಿವಿಲ್​ ಅಥವಾ ಪರಿಸರ ಅಥವಾ ಪಬ್ಲಿಕ್​ ಹೆಲ್ತ್​​ನಲ್ಲಿ ಇಂಜಿನಿಯರಿಂಗ್​ ಪದವಿ ಅಥವಾ ಪದವಿ ಆಗಿರಬೇಕು.
  • ಗ್ರಾಮೀಣ ನೀರು ಮತ್ತು ನೈರ್ಮಲ್ಯ ಕಾರ್ಯಕ್ರಮದಲ್ಲಿ ಐದು ವರ್ಷ ಹುದ್ದೆ ಅನುಭವ ಹೊಂದಿರಬೇಕು
  • ಈಗಾಗಲೇ ಜಲ ಸಂಪನ್ಮೂಲ ನಿರ್ವಹಣೆ ಸೇರಿದಂತೆ ಸಂಬಂಧಿತ ಕ್ಷೇತ್ರದಲ್ಲಿ ಹುದ್ದೆ ಅನುಭವ ಹೊಂದಿರಬೇಕು.
  • ಜಲ್​ ಜೀವನ್​ ಮಿಷನ್​ ಯೋಜನೆ ಅಡಿ ಕೆಲಸ ಮಾಡಿದ ಅನುಭವ ಹೊಂದಿರಬೇಕು.
  • ಕನ್ನಡ ಮತ್ತು ಇಂಗ್ಲಿಷ್​ನಲ್ಲಿ ಸರಾಗ ಮಾತನಾಡಲು ಬರಬೇಕು. ಜೊತೆಗೆ ಕಂಪ್ಯೂಟರ್​ ಜ್ಞಾನ ಹೊಂದಿರಬೇಕು.

ವೇತನ ಮತ್ತು ಅವಧಿ: ಈ ಹುದ್ದೆಯೂ ಸಂಪೂರ್ಣವಾಗಿ ತಾತ್ಕಲಿಕವಾಗಿದ್ದು, ಒಂದು ವರ್ಷದ ಗುತ್ತಿಗೆ ಅವಧಿಗೆ ಮಾತ್ರ ನೇಮಕ ಮಾಡಲಾಗುವುದು. ಈ ಅವಧಿಯಲ್ಲಿ ಅಭ್ಯರ್ಥಿಗಳ ಕಾರ್ಯಕ್ಷಮತೆ ಆಧಾರದ ಮೇಲೆ ಕಾಲ ಕಾಲಕ್ಕೆ ಹುದ್ದೆಯ ನವೀಕರಣ ಮಾಡಲಾಗಿದೆ. ಈ ಹುದ್ದೆಗಳಿಗೆ ಮಾಸಿಕ 60 ಸಾವಿರದಿಂದ 70 ಸಾವಿರ ರೂ ವೇತನ ನಿಗದಿ ಪಡಿಸಲಾಗಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ ಗರಿಷ್ಠ 45ವರ್ಷಗಳು ಮೀರಿರಬಾರದು. ಈ ಹುದ್ದೆಗಳನ್ನು ಶಾರ್ಟ್​​ಲಿಸ್ಟ್​​ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ:ಈ ಹುದ್ದೆ ಕುರಿತಾದ ನಿಗದಿತ ಅರ್ಜಿ ನಮೂನೆ ಆರ್​ಡಿಪಿಆರ್​ ಅಧಿಕೃತ ಜಾಲತಾಣವಾದ rdpr.karnataka.gov.in ಅಥವಾ swachhamevajayate.org ಅಲ್ಲಿ ಲಭ್ಯವಾಗಿದೆ. ಈ ಅರ್ಜಿ ನಮೂನೆಯಲ್ಲಿ ವಿದ್ಯಾರ್ಹತೆ, ಅನುಭ, ವಯೋಮಿತಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಭರ್ತಿ ಮಾಡಿ ಈ ಕೆಳಗಿನ ವಿಳಾಸಕ್ಕೆ ಹಾರ್ಡ್​ ಪ್ರತಿಗಳನ್ನು ನಿಗದಿತ ದಿನಾಂಕದ ಮುನ್ನ ಸಲ್ಲಿಕೆ ಮಾಡಬೇಕು.

ಅರ್ಜಿ ಸಲ್ಲಿಸುವ ವಿಳಾಸ: ಆಯುಕ್ತರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, 2ನೇ ಮಹಡಿ ಕೆಎಚ್​ಬಿ ಕಟ್ಟಡ, ಕಾವೇರಿ ಭವನ, ಕೆಜಿ ರಸ್ತೆ, ಬೆಂಗಳೂರು- 560009

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜೂನ್​ 30 ಆಗಿದೆ. ಈ ಹುದ್ದೆ ಕುರಿತು ವಿವರವಾದ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ವೀಕ್ಷಣೆಗೆ ಅಭ್ಯರ್ಥಿಗಳು rdpr.karnataka.gov.in ಅಧಿಕೃತ ಜಾಲತಾಣಕ್ಕೆ ಭೇಟಿ ನೀಡ ಬಹುದಾಗಿದೆ.

ಇದನ್ನೂ ಓದಿ: ಭಾರತೀಯ ಸೇನೆಯಲ್ಲಿ ನೇಮಕಾತಿ: 196 ಹುದ್ದೆಗಳಿಗೆ ಅರ್ಜಿ ಆಹ್ವಾನ.. ಆಸಕ್ತರು ಇಂದೇ ಅರ್ಜಿ ಸಲ್ಲಿಸಿ!

ABOUT THE AUTHOR

...view details