ಕರ್ನಾಟಕ

karnataka

ETV Bharat / state

ದೇಶದ ವಿಪಕ್ಷಗಳ ಕಥೆ ಎತ್ತು ಏರಿಗೆ ಎಳೆದ್ರೆ, ಕೋಣ ನೀರಿಗೆ ಎಳೀತು ಎಂಬಂತಿದೆ: ಬಿ ವೈ ವಿಜಯೇಂದ್ರ - ವಿಪಕ್ಷಗಳ ಒನ್​ ಲೈನ್​ ಅಜೆಂಡಾ

ಮತ್ತೆ ಮೋದಿ ಪ್ರಧಾನಿ ಆಗಬಾರದು ಎನ್ನುವುದು ವಿಪಕ್ಷಗಳ ಒನ್​ ಲೈನ್​ ಅಜೆಂಡಾವಾಗಿದೆ ಎಂದು ಬಿಜೆಪಿ ಶಾಸಕ ಬಿ ವೈ ವಿಜಯೇಂದ್ರ ಹೇಳಿದ್ದಾರೆ.

MLA B Y VIjayendra
ಶಾಸಕ ಬಿ ವೈ ವಿಜಯೇಂದ್ರ

By

Published : Jul 17, 2023, 12:18 PM IST

Updated : Jul 17, 2023, 12:36 PM IST

ಶಾಸಕ ಬಿ ವೈ ವಿಜಯೇಂದ್ರ

ಬೆಂಗಳೂರು: ದೇಶದ ವಿಪಕ್ಷಗಳ ಕಥೆ ಎತ್ತು ಏರಿಗೆ ಎಳೆದ್ರೆ, ಕೋಣ ನೀರಿಗೆ ಎಳೀತು ಎಂಬಂತಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಶಾಸಕ ಬಿ ವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ. ಇಂದು ವಿಧಾನಸೌಧದಲ್ಲಿ ಮಾತನಾಡಿದ ಅವರು, ಬೆಂಗಳೂರು ಮಹಾನಗರದಲ್ಲಿ ದೇಶದ ಎಲ್ಲಾ ವಿಪಕ್ಷಗಳು ಒಗ್ಗೂಡಿ ಸಭೆ ಮಾಡ್ತಿವೆ. ಇಂಥ ಪರಿಸ್ಥಿತಿ ವಿಪಕ್ಷಗಳಿಗೆ ಬಂದೊದಗಿದೆ. ಮೋದಿಜಿ ನಾಯಕತ್ವವನ್ನು ಜಗತ್ತು ಕೊಂಡಾಡುವಾಗ, 20ಕ್ಕೂ ಹೆಚ್ಚು ರಾಷ್ಟ್ರಗಳು ಅವರಿಗೆ ಅತ್ಯುನ್ನತ ನಾಗರೀಕ ಪ್ರಶಸ್ತಿ ನೀಡಿವೆ. ಆದ್ರೆ ನಮ್ಮ ದೇಶದ ವಿಪಕ್ಷಗಳಿಗೆ ದೇಶ ಕಟ್ಟುವ ಚಿಂತನೆ ಇಲ್ಲ ಎಂದು ಕಿಡಿಕಾರಿದರು.

ಹೇಗಾದರೂ ಮಾಡಿ ಮತ್ತೆ ಅಧಿಕಾರಕ್ಕೆ ಬರಬೇಕು ಅನ್ನೋದು ಅವರ ಉದ್ದೇಶ. ಮತ್ತೆ ಮೋದಿ ಪ್ರಧಾನಿ ಆಗಬಾರದು ಅನ್ನೋ ಒನ್ ಲೈನ್ ಅಜೆಂಡಾ ಇವರದ್ದು. ಅವರಿಗೆ ಶುಭವಾಗಲಿ, ನಿವೇನೇ ಮಾಡಿದ್ರು ಜನ ಇದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಮೂರನೇ ಬಾರಿ ಮೋದಿ ಪ್ರಧಾನಿ ಆಗೋದನ್ನು ತಡೆಯಲು ಸಾಧ್ಯವಿಲ್ಲ ಎಂದು ವಿಜಯೇಂದ್ರ ಹೇಳಿದರು.

ಜೆಡಿಎಸ್ ಜೊತೆ ಮೈತ್ರಿ ವಿಚಾರವಾಗಿ ಪ್ರತಿಕ್ರಿಯಿಸಿ, ನನಗೂ ಆ ವಿಚಾರ ಗೊತ್ತಿಲ್ಲ. ಮಾಧ್ಯಮದಲ್ಲಿ ನೋಡಿ ತಿಳಿದುಕೊಂಡೆ‌. ನಾನು ಮೊದಲ ಬಾರಿ ಶಾಸಕನಾಗಿದ್ದೇನೆ. ಪಕ್ಷದ ಹಿತದೃಷ್ಟಿಯಿಂದ ಹೈಕಮಾಂಡ್ ಯಾವುದೇ ತೀರ್ಮಾನ ತೆಗೆದುಕೊಳ್ಳಲಿ. ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.

ವಿ. ಸೋಮಣ್ಣಗೆ ನನ್ನ ಬೆಂಬಲವೂ ಇದೆ:ಮಾಜಿ ಸಚಿವ ವಿಸೋಮಣ್ಣ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ವಿಚಾರವಾಗಿ ವಿಜಯೇಂದ್ರ ಅವರು ನಮ್ಮ ಬೆಂಬಲ ಇದೆ ಎನ್ನುವ ಮೂಲಕ ಅಚ್ಚರಿ ಹೇಳಿಕೆ ನೀಡಿದ್ದಾರೆ. ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಲಿ. ನನ್ನ ಬೆಂಬಲವೂ ಇದೆ ಎಂದು ತಿಳಿಸಿದ್ದಾರೆ. ವಿ ಸೋಮಣ್ಣ ಬಹಿರಂಗವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಸಂಬಂಧ ಹೈ ಕಮಾಂಡ್​ಗೂ ಪತ್ರ ಬರೆದಿದ್ದರು. ಇದೀಗ ಬಿ ವೈ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷ ಸ್ಥಾನದ ಬೇಡಿಕೆಗೆ ಬೆಂಬಲ ಸೂಚಿಸಿ ಹೇಳಿಕೆ ನೀಡಿರುವುದು ಅಚ್ಚರಿ ಮೂಡಿಸಿದೆ.

ಮಳೆ ಕೊರತೆ, ರೈತರ ಆತ್ಮಹತ್ಯೆಯ ವಿಚಾರವಾಗಿ ಮಾತನಾಡಿದ ಶಿಕಾರಿಪುರದ ಶಾಸಕ, ಪಕ್ಷದ ಹಿರಿಯ ನಾಯಕರ ಜೊತೆ ಚರ್ಚೆ ಮಾಡ್ತೀವಿ. ಸದನದಲ್ಲಿ ಇದು ಚರ್ಚೆಯಾಗಬೇಕು. ಮಳೆ‌ ಮುಂದುವರೆದು ಹೋಗ್ತಿದೆ. ರೈತರ ಬಗ್ಗೆ ಗಂಭೀರವಾಗಿ ಪರಿಗಣಿಸಿ ಚರ್ಚೆ ಮಾಡಬೇಕು. ಆಡಳಿತ ಪಕ್ಷ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ:ಬೆಂಗಳೂರಲ್ಲಿ ಇಂದಿನಿಂದ ಪ್ರತಿಪಕ್ಷಗಳ ಸಭೆ: ಪಾಲ್ಗೊಳ್ಳುವ ಪಕ್ಷಗಳು, ನಾಯಕರ ಪಟ್ಟಿ ಇಲ್ಲಿದೆ..

Last Updated : Jul 17, 2023, 12:36 PM IST

ABOUT THE AUTHOR

...view details