ಕರ್ನಾಟಕ

karnataka

ETV Bharat / state

ಬಿಎಸ್​​ವೈ ಭೇಟಿ ಮಾಡಿದ ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್​!.. ಏನೀ ಭೇಟಿ ವಿಶೇಷ? - ಬಿಎಸ್​ ಯಡಿಯೂರಪ್ಪ ಭೇಟಿ ಮಾಡಿ ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್

ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ಯಡಿಯೂರಪ್ಪ ನಿವಾಸ ಧವಳಗಿರಿಗೆ ಆಗಮಿಸಿ ಉತ್ತರಾಖಂಡ ಸಿಎಂ ಭೇಟಿ ಮಾಡಿ, ಕೆಲಹೊತ್ತು ಮಾತುಕತೆ ನಡೆಸಿದರು.

Uttarakhand CM Trivendra Singh Rawat meet BSY
ಬಿಎಸ್​ ಯಡಿಯೂರಪ್ಪ ಭೇಟಿ ಮಾಡಿ ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್​

By

Published : Jan 1, 2020, 8:17 PM IST

ಬೆಂಗಳೂರು:ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್​ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ಯಡಿಯೂರಪ್ಪ ನಿವಾಸ ಧವಳಗಿರಿಗೆ ಆಗಮಿಸಿ ಉತ್ತರಾಖಂಡ ಸಿಎಂ ಭೇಟಿ ಮಾಡಿ ಪ್ರಧಾನ ಮಂತ್ರಿಯವರ ಮಹತ್ವಾಕಾಂಕ್ಷೆಯ ಯೋಜನೆಯಾದ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮದ ಕುರಿತು ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಚರ್ಚಿಸಿದರು. ಇದೇ ವೇಳೆ, ಏಕ ಭಾರತ್​ ಶ್ರೇಷ್ಠ ಭಾರತ್​​ ಕಾರ್ಯಕ್ರಮದ ಕುರಿತು ಸಹ ಉಭಯ ರಾಜ್ಯದ ಸಿಎಂ ಚರ್ಚೆ ನಡೆಸಿದರು ಎಂದು ತಿಳಿದು ಬಂದಿದೆ.

ಬಿಎಸ್​ ಯಡಿಯೂರಪ್ಪ ಭೇಟಿ ಮಾಡಿ ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್​

ಕರ್ನಾಟಕದ ವಿದ್ಯಾರ್ಥಿಗಳು ಈಗಾಗಲೇ ಉತ್ತರಾಖಂಡ ರಾಜ್ಯಕ್ಕೆ ಭೇಟಿ ನೀಡಿದ್ದು, ಅಲ್ಲಿನ ವಿದ್ಯಾರ್ಥಿಗಳು ಕೆಲವೇ ದಿನಗಳಲ್ಲಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಇದರೊಂದಿಗೆ ಎರಡೂ ರಾಜ್ಯಗಳ ಅಭಿವೃದ್ಧಿ ಚಟುವಟಿಕೆಗಳು, ಪರಸ್ಪರ ಸಹಕಾರ ಮೊದಲಾದ ಅಂಶಗಳ ಕುರಿತು ಚರ್ಚಿಸಿದರು.

For All Latest Updates

ABOUT THE AUTHOR

...view details