ಕರ್ನಾಟಕ

karnataka

ETV Bharat / state

ಪಂಚಮಸಾಲಿ ಹೋರಾಟಗಾರರಿಂದ ಯೂ ಟರ್ನ್: ವಿಧಾನಸೌಧದ ಸುತ್ತ ಪೊಲೀಸ್ ಬಂದೋಬಸ್ತ್ - Veerashaiva Panchamasaali Convention

ವೀರಶೈವ ಪಂಚಮಸಾಲಿ ಸಮಾವೇಶದ ಬಳಿಕ ವಿಧಾನಸೌಧದ ಕಡೆಗೆ ಜನರು ಬರುವ ಸಾಧ್ಯತೆ ಹಿನ್ನೆಲೆ ಕಬ್ಬನ್ ಪಾರ್ಕ್ ಇನ್ಸ್​​ಪೆಕ್ಟರ್, 5 ಪಿಎಸ್ಐ, 250ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭದ್ರತೆಗೆ ನಿಯೋಜನೆಗೊಂಡಿದ್ದಾರೆ.

utern-by-the-panchamsali-comminity-fighters-news
ವಿಧಾನಸೌಧ ಸುತ್ತ ಪೊಲೀಸ್ ಬಂದೋಬಸ್ತ್

By

Published : Feb 21, 2021, 5:13 PM IST

Updated : Feb 21, 2021, 5:54 PM IST

ಬೆಂಗಳೂರು:ಪಂಚಮಸಾಲಿ ಬೇಡಿಕೆ ಈಡೇರದಿದ್ದರೆ ವಿಧಾನಸೌಧ ಮುತ್ತಿಗೆ ಹಾಕುವ ಬಗ್ಗೆ ಎಚ್ಚರಿಕೆ ನೀಡಿರುವ ಕಾರಣ ಹೆಜ್ಜೆ ಹೆಜ್ಜೆಗೂ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ವಿಧಾನಸೌಧ ಸುತ್ತ ಪೊಲೀಸ್ ಬಂದೋಬಸ್ತ್

ಓದಿ: 2ಎ ಮೀಸಲಾತಿ ಪಾದಯಾತ್ರೆ ಸಮಾವೇಶ ಮುಕ್ತಾಯ : ರಾಜಧಾನಿಯಲ್ಲಿ ಟ್ರಾಫಿಕ್ ಜಾಮ್​​

ವಿಧಾನಸೌಧದ ಎದುರು ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, ಹೆಜ್ಜೆ ಹೆಜ್ಜೆಗೂ ಪೊಲೀಸರು ನಿಂತಿದ್ದಾರೆ. ವಿಧಾನಸೌಧ ನೋಡಲು ಬಂದವರಿಗೆ ನಿರಾಸ ಎದುರಾಗಿದ್ದು, ಗುಂಪು ಗುಂಪಾಗಿ ನಿಲ್ಲದಂತೆ ಸೂಚನೆ ನೀಡಲಾಗುತ್ತಿದೆ.

ಇಂದು ಭಾನುವಾರ ಎಂದು ವಿಧಾನಸೌಧ ವೀಕ್ಷಣೆಗೆ ಬರುತ್ತಿರುವ ಜನರನ್ನು ವಾಪಸ್ ಕಳುಹಿಸುತ್ತಿರುವ ಪೊಲೀಸರು, ಚಾಲುಕ್ಯ ಸರ್ಕಲ್​​ನಲ್ಲಿ ಕೂಡ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ವೀರಶೈವ ಪಂಚಮಸಾಲಿ ಸಮಾವೇಶದ ಬಳಿಕ ವಿಧಾನಸೌಧದ ಕಡೆಗೆ ಜನರು ಬರುವ ಸಾಧ್ಯತೆ ಹಿನ್ನೆಲೆ ಕಬ್ಬನ್ ಪಾರ್ಕ್ ಇನ್ಸ್​​ಪೆಕ್ಟರ್, 5 ಪಿಎಸ್ಐ, 250ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭದ್ರತೆಗೆ ನಿಯೋಜನೆಗೊಂಡಿದ್ದಾರೆ.

ಚಾಲುಕ್ಯ ಸರ್ಕಲ್​​ನಿಂದ ವಿಧಾನಸೌಧದ ಕಡೆ ತೆರಳುವ ಮಾರ್ಗವನ್ನು ಬ್ಯಾರಿಕೇಡ್​​ನಿಂದ ಬಂದ್ ಮಾಡಿರುವ ಪೊಲೀಸರು, ವಿಧಾನಸೌಧದ ಮುಂಭಾಗದಲ್ಲಿ ಫೋಟೋಗ್ರಾಫಿ ಬ್ಯಾನ್ ಮಾಡಿದ್ದಾರೆ.

ವಿಧಾನಸೌಧದ ಕಡೆ ಪಾದಯಾತ್ರೆ ಹೊರಟಿದ್ದು, ಪೊಲೀಸ್ ಅನುಮತಿ ಇಲ್ಲದಿದ್ದರೂ ಯೂ ಟರ್ನ್ ಹೊಡೆದು ಪಾದಯಾತ್ರೆ ಶುರು ಮಾಡಲಾಗಿದೆ. ಮೈದಾನದಿಂದ ಹೊರ ಬಂದು ಬಲಕ್ಕೆ ತಿರುಗಿದರೂ ಸ್ವಲ್ಪ ದೂರದ ಬಳಿಕ ಪೊಲೀಸರಿಗೆ ಯಾಮಾರಿಸಿ, ಯೂ ಟರ್ನ್ ಮಾಡಿ ವಿಧಾನಸೌಧದ ಕಡೆ ಹೊರಟರು.

ವಿಂಡ್ಸರ್ ಮ್ಯಾನರ್ ಬ್ರಿಡ್ಜ್ ಬಳಿ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಿದ ಪೊಲೀಸರು, ಬ್ಯಾರಿಕೇಟ್ ಜೊತೆಗೆ ರಸ್ತೆಗೆ ಅಡ್ಡಲಾಗಿ ಪೊಲೀಸ್ ವಾಹನಗಳನ್ನು ನಿಲ್ಲಿಸಿದ್ದಾರೆ.

Last Updated : Feb 21, 2021, 5:54 PM IST

ABOUT THE AUTHOR

...view details