ಬೆಂಗಳೂರು: ಮಂಗಳೂರು ರೈಲ್ವೆ ನಿಲ್ದಾಣಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ಹೆಸರನ್ನು ನಾಮಕರಣ ಮಾಡುವಂತೆ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ವಿಧಾನಸಭೆಯಲ್ಲಿ ಒತ್ತಾಯಿಸಿದರು.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಬ್ರಹ್ಮಶ್ರೀ ನಾರಾಯಣ ಗುರುಗಳು ದಕ್ಷಿಣ ಕನ್ನಡಕ್ಕೆ ಮಾತ್ರವಲ್ಲ, ಇಡೀ ನಾಡಿಗೆ ದೊಡ್ಡ ಆಧ್ಯಾತ್ಮಿಕ ಗುರು. ನಾರಾಯಣ ಗುರುಗಳು ಕೇರಳದಿಂದ ಮಂಗಳೂರಿಗೆ ಮೊದಲು ಬಂದಿಳಿದದ್ದು ಈಗಿನ ರೈಲ್ವೆ ನಿಲ್ದಾಣ ಇರುವ ಜಾಗದಲ್ಲಾಗಿದೆ. ಹೀಗಾಗಿ ನಾರಾಯಣ ಗುರುಗಳ ಹೆಸರನ್ನು ರೈಲ್ವೆ ನಿಲ್ದಾಣಕ್ಕೆ ನಾಮಕರಣ ಮಾಡುವುದು ಸೂಕ್ತ ಎಂದರು.