ಬೆಂಗಳೂರು:ಕಾಂಗ್ರೆಸ್ ಪಕ್ಷವಾಗಲಿ, ಮೈತ್ರಿ ಸರ್ಕಾರವಾಗಲಿ ಪೋನ್ ಕದ್ದಾಲಿಕೆ ಮಾಡಿಸಿಲ್ಲ. ಈ ಕುರಿತು ತನಿಖೆ ಮಾಡಿಸಲು ಸಿಎಂ ಸ್ವತಂತ್ರರು ಎಂದು ಮಾಜಿ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.
ನಾವು ಫೋನ್ ಕದ್ದಾಲಿಕೆ ಮಾಡಿಸಿಲ್ಲ: ಯುಟಿ ಖಾದರ್ ಸ್ಪಷ್ಟನೆ
ರಾಜ್ಯ ನಾಯಕರ ಫೋನ್ ಕದ್ದಾಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಯು.ಟಿ ಖಾದರ್ ಮಾತನಾಡಿ, ಕಾಂಗ್ರೆಸ್ ಪಕ್ಷವಾಗಲಿ, ಮೈತ್ರಿ ಸರ್ಕಾರವಾಗಲಿ ಪೋನ್ ಕದ್ದಾಲಿಕೆ ಮಾಡಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಯುಟಿ ಖಾದರ್ ಸ್ಪಷ್ಟನೆ
ನಗರದ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನನಗೆ ಫೋನ್ ಟ್ಯಾಪಿಂಗ್ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಈ ಕುರಿತು ಮಾಧ್ಯಮಗಳ ಮುಖಾಂತರ ಮಾಹಿತಿ ನೋಡಿದ್ದೇನೆ. ಸಂವಿಧಾನ ಬದ್ಧವಾಗಿ ಹಾಗೂ ಕಾನೂನು ಅಡಿಯಲ್ಲಿ ತನಿಖೆ ಮಾಡಿಸಲಿ ಎಂದರು.
ಇನ್ನು ನನ್ನ ಫೋನ್ ಕದ್ದಾಲಿಕೆ ಮಾಡಿದ್ರೆ, ಅದು ಅವರ ಟೈಮ್ ವೇಸ್ಟ್ ಆಗಿರುತ್ತೆ ಅಷ್ಟೇ. ಯಡಿಯೂರಪ್ಪ ಸಿಎಂ ಆಗಿದ್ದಾರೆ. ಅವರು ತನಿಖೆ ಮಾಡಿಸುತ್ತಾರೆ ಎಂದರೆ ಮಾಡಲಿ. ಇದರಲ್ಲಿ ನಮ್ಮ ಪಾತ್ರ ಮಾತ್ರವಲ್ಲ, ಸಮ್ಮಿಶ್ರ ಸರ್ಕಾರದ ಪಾತ್ರವೂ ಕೂಡ ಇಲ್ಲ ಎಂದರು.