ಬೆಂಗಳೂರು: ಮಂಗಳೂರನಲ್ಲಿ ಗುರುವಾರ ನಡೆದ ಪ್ರತಿಭಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಈ ಹಿಂಸಾಚಾರದ ಹೊಣೆಯನ್ನು ಶಾಸಕ ಯು.ಟಿ. ಖಾದರ್ ಹೊರಬೇಕು. ಯು ಟಿ ಖಾದರ್ ಭಯೋತ್ಪಾದಕರ ರೀತಿ ಮಾತನಾಡಿದ್ದೇ ಹಿಂಸಾಚಾರಕ್ಕೆ ಕಾರಣವೆಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ರೇಣುಕಾಚಾರ್ಯ ಆರೋಪಿಸಿದ್ದಾರೆ.
ಯು ಟಿ ಖಾದರ್ ಭಯೋತ್ಪಾದಕರ ರೀತಿ ಮಾತನಾಡಿದ್ದಾರೆ: ರೇಣುಕಾಚಾರ್ಯ ಕಿಡಿ - ಸಂಪೂರ್ಣ ಹೊಣೆ ಯು.ಟಿ.ಖಾದರ್ ಹೊರಬೇಕು
ಮಂಗಳೂರಲ್ಲಿ ನಡೆದ ಹಿಂಸಾಚಾರಕ್ಕೆ ಯು.ಟಿ.ಖಾದರ್ ಕಾರಣ, ಅವರು ಭಯೋತ್ಪಾದಕರ ರೀತಿ ಮಾತನಾಡಿದ್ದೇ ಈ ಘಟನೆಗೆ ಕಾರಣವೆಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಆರೋಪಿಸಿದ್ದಾರೆ.

ಶಾಸಕ ರೇಣುಕಾಚಾರ್ಯ ಕಿಡಿ
ಶಾಸಕ ರೇಣುಕಾಚಾರ್ಯ ಕಿಡಿ
ಸಿಎಂ ನಿವಾಸದ ಬಳಿ ಮಾತನಾಡಿದ ಅವರು, ಸಿಎಬಿ ವಿರುದ್ಧ ಮಂಗಳೂರಲ್ಲಿ ಪ್ರತಿಭಟನೆಗೆ ಯು ಟಿ ಖಾದರ್ ಪ್ರಚೋದನೆ ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದವರಿಗೆ ಮಾಡಲು ಯಾವ ಕೆಲಸವೂ ಇಲ್ಲದೆ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನರ ದಾರಿ ತಪ್ಪಿಸುತ್ತಿದ್ದಾರೆ. ಕಾಂಗ್ರೆಸ್ ಗೆ ಭಯೋತ್ಪಾದಕರ ಪಕ್ಷ ಅಂತ ಹೆಸರಿಡಬೇಕು ಎಂದು ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.