ಬೆಂಗಳೂರು :ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದಡಿ ಕೇಂದ್ರ ಡಿಸಿಪಿ ಕಚೇರಿಗೆ ದೂರು ಸಲ್ಲಿಕೆಯಾಗಿದೆೆ. ಆರೋಪಿಯನ್ನು ಬಂಧಿಸಲು ಕನ್ನಡಪರ ಸಂಘಟನೆಗಳಿಂದ ಕೂಗು ಕೇಳಿ ಬರುತ್ತಿದೆ.
ಹೊಳೆನರಸೀಪುರ ನಿವಾಸಿ ಶಾಬಾಝ್ ಉಲ್ಲಾಖಾನ್ ಯೂಟ್ಯೂಬ್ ಚಾನಲ್ವೊಂದರಲ್ಲಿ ಮುಖ್ಯಮಂತ್ರಿಯವರ ಬಗ್ಗೆ ಕೀಳು ಶಬ್ದಗಳಿಂದ ನಿಂದಿಸಿದ್ದಾನೆ. ಪಾಕಿಸ್ತಾನದಿಂದ ಕರೆ ಬರುತ್ತಿದೆ ಎಂದು ಹೇಳಿಕೊಂಡಿದ್ದಾನೆ. ಅಷ್ಟೇ ಅಲ್ಲ, ಕೋಮು ಸೌಹಾರ್ದತೆಗೆ ಧಕ್ಕೆ ತರುವ ಮಾತುಗಳನ್ನಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.