ಬೆಂಗಳೂರು:ಮೂತ್ರಶಾಸ್ತ್ರಜ್ಞ ಡಾ.ವಿನಯ್ ಎನ್ ಕೌಶಿಕ್ ಪ್ರಾಸ್ಟೇಟ್ ಕ್ಯಾನ್ಸರ್ ಬಗ್ಗೆ ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ವಯಸ್ಸಾದ ಪುರುಷರು ಹಲವು ಮೂತ್ರ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಪದೇ ಪದೇ ಮೂತ್ರ ವಿಸರ್ಜನೆ, ಮೂತ್ರ ಸೋರಿಕೆಯೊಂದಿಗೆ ತುರ್ತು ಅಥವಾ ಮೂತ್ರದ ಅಪೂರ್ಣ ಹರಿವು ಆಗಾಗ್ಗೆ ಸಂಭವಿಸುತ್ತಿರುತ್ತದೆ. ಮೂತ್ರ ಕೋಶದ ಕೆಳಗೆ ಇರುವ ಪ್ರಾಸ್ಟೇಟ್ ಗ್ರಂಥಿಯ ಬೆಳವಣಿಗೆ ಸಾಮಾನ್ಯವಾಗಿ ವಯಸ್ಸಾದ ಕಾರಣದಿಂದಾಗಿ ಕಂಡುಬರುತ್ತದೆ. ಆದರೆ ಕೆಲವು ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಆಗಿ ಕೂಡ ಬದಲಾಗುತ್ತದೆ. ಅನುವಂಶೀಯವಾಗಿ ಹತ್ತಿರದ ಸಂಬಂಧಿಗಳಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಹಾಗೂ ಮೂತ್ರ ಸಂಬಂಧಿತ ತೊಂದರೆ ಇರುವವರು ಮೂತ್ರಶಾಸ್ತ್ರಜ್ಞರನ್ನು ಸಂಪರ್ಕಿಸುವುದು ಉತ್ತಮ ಎಂದು ಸಲಹೆ ನೀಡಿದರು.