ಬೆಂಗಳೂರು: ಆ್ಯಂಬುಲೆನ್ಸ್ಗಳ ಕೊರತೆ ಹಿನ್ನೆಲೆಯಲ್ಲಿ ತುರ್ತು ವೈದ್ಯಕೀಯ ಸೇವೆಗಾಗಿ ಓಲಾ, ಉಬರ್ ಸಂಸ್ಥೆಯ ಮೊರೆ ಹೋಗಿರುವ ಆರೋಗ್ಯ ಇಲಾಖೆ 200 ವಾಹನಗಳನ್ನು ಆ್ಯಂಬುಲೆನ್ಸ್ಗಳ ರೀತಿ ಬಳಸಿಕೊಳ್ಳುತ್ತಿದ್ದು, ಆರೋಗ್ಯ ಸಚಿವ ಬಿ. ಶ್ರೀರಾಮುಲು ಈ ಸೇವೆಗೆ ಚಾಲನೆ ನೀಡಿದರು.
ತುರ್ತು ವೈದ್ಯಕೀಯ ಸೇವೆಗೆ ಓಲಾ, ಊಬರ್ ಬಳಕೆ: ಶ್ರೀರಾಮುಲು ಚಾಲನೆ - Sriramulu
ತುರ್ತು ವೈದ್ಯಕೀಯ ಸೇವೆಗಾಗಿ 200 ಓಲಾ ಹಾಗೂ ಉಬರ್ ಕಾರುಗಳನ್ನು ಬಳಸಿಕೊಳ್ಳಲಾಗುತ್ತಿದೆ. ಆರೋಗ್ಯ ಸಚಿವರಾದ ಶ್ರೀರಾಮುಲು ಅವರು ಮಂಗಳವಾರ ಈ ಸೇವೆಗೆ ಚಾಲನೆ ನೀಡಿದ್ರು.
ಸೆವೆನ್ ಮಿನಿಸ್ಟರ್ ಕ್ವಾಟ್ರಸ್ನಲ್ಲಿರುವ ಸರ್ಕಾರಿ ನಿವಾಸದಲ್ಲಿ ಓಲಾ ಹಾಗು ಉಬರ್ ಕಾರುಗಳಿಗೆ ಸಚಿವ ಶ್ರೀರಾಮುಲು ಹಸಿರು ನಿಶಾನೆ ತೋರುವ ಮೂಲಕ ಸಾಂಕೇತಿಕ ಚಾಲನೆ ನೀಡಿದರು. ಸಾಮಾನ್ಯ ರೋಗಿಗಳ ತುರ್ತು ಸೇವೆಗಾಗಿ ಓಲಾ, ಉಬರ್ ಕ್ಯಾಬ್ಗಳು ರಸ್ತೆಗೆ ಇಳಿದಿದ್ದು, ಇಂದಿನಿಂದ 100 ಓಲಾ, 100 ಉಬರ್ ಕ್ಯಾಬ್ಗಳು ನಗರದಲ್ಲಿ ಸಂಚಾರ ನಡೆಸಲಿವೆ.
ಈ ಕುರಿತು ಮಾತನಾಡಿದ ಸಚಿವ ಶ್ರೀರಾಮುಲು, 108 ಆ್ಯಂಬುಲೆನ್ಸ್ಗಳು ಕೊರೊನಾ ವೈರಸ್ ರೋಗಿಗಳಿಗೆ ಬಳಕೆಯಾಗುತ್ತಿವೆ. ಹೀಗಾಗಿ ಸಾಮಾನ್ಯ ರೋಗಿಗಳಿಗೆ ತೊಂದರೆಯಾಗಬಾರದು. ಆ ಕಾರಣಕ್ಕೆ ಓಲಾ, ಉಬರ್ ಕ್ಯಾಬ್ ಬಳಸಿಕೊಳ್ಳುತ್ತಿದ್ದೇವೆ. ಟೋಲ್ ಫ್ರೀ ನಂಬರ್ ಕೂಡ ಕೊಟ್ಟಿದ್ದೇವೆ. 100 ಓಲಾ, 100 ಊಬರ್ ವಾಹನಗಳಿಗೆ ಚಾಲನೆ ನೀಡಿದ್ದೇನೆ. ಬೇರೆ ಸಾಮಾನ್ಯ ರೋಗಿಗಳು, ಸಾಮಾನ್ಯರ ಆರೋಗ್ಯ ದೃಷ್ಠಿಯಿಂದ ಇವು ಬಳಕೆಯಾಗಲಿವೆ ಎಂದರು.