ದೇವನಹಳ್ಳಿ :ಬ್ಯಾಗೇಜ್ ತಪಾಸಣೆ ನಡೆಸುವ ವೇಳೆ ಪ್ರಯಾಣಿಕನ ಬ್ಯಾಗ್ನಲ್ಲಿ ಜೀವಂತ ಗುಂಡು ಪತ್ತೆಯಾಗಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಅಮೆರಿಕ ಪ್ರಜೆಯನ್ನು ಬಂಧಿಸಿದ್ದಾರೆ. ಬೆಂಗಳೂರಿನಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ಅಮೆರಿಕ ಪ್ರಜೆಯ ಬ್ಯಾಗ್ನಲ್ಲಿ ಗುಂಡುಗಳು ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ನಿನ್ನೆ ಸಂಜೆ 5:55ರ ಏರ್ ಏಷ್ಯಾದ ಫ್ಲೈಟ್ ನಂಬರ್ 15-592 ವಿಮಾನವನ್ನ ಹತ್ತುವ ಸಮಯದಲ್ಲಿ ಪ್ರಯಾಣಿಕರ ಬ್ಯಾಗೇಜ್ಗಳನ್ನ ಸ್ಕ್ರೀನಿಂಗ್ ಮಾಡುವ ವೇಳೆ ಬ್ಯಾಗ್ನಲ್ಲಿ ಜೀವಂತ ಗುಂಡು ಪತ್ತೆಯಾಗಿದೆ. ಬೆಂಜಮಿನ್ ಡೇನಿಯಲ್ ಹ್ಯೂಸ್ ಎಂಬ ಅಮೆರಿಕ ಪ್ರಜೆಯ ಬ್ಯಾಗ್ನಲ್ಲಿ ಜೀವಂತ ಗುಂಡು ಸಿಕ್ಕಿದ್ದು, ಆತನನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.