ಬೆಂಗಳೂರು: ಬಹು ನಿರೀಕ್ಷಿತ ಕೇಂದ್ರ ಲೋಕಸೇವಾ ಆಯೋಗದ ಫಲಿತಾಂಶ ಹೊರಬಿದ್ದಿದೆ. 2023ನೇ ಸಾಲಿನ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿಯೂ ಕನ್ನಡಿಗರು ತಮ್ಮ ಸಾಧನೆ ಮೂಲಕ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಪ್ರಮುಖವಾಗಿ ಕರ್ನಾಟಕದ 25ಕ್ಕೂ ಹೆಚ್ಚು ಅಭ್ಯರ್ಥಿಗಳು ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇದರಲ್ಲಿ ಹುಬ್ಬಳ್ಳಿಯ ಬಸ್ ಕಂಡಕ್ಟರ್ ಮಗ ಹಾಗೂ ತಾಂಡ ಯುವಕ ಕೂಡ ಅರ್ಹತೆ ಪಡೆದಿರುವುದು ಯುವ ಜನತೆಗೆ ಸ್ಫೂರ್ತಿಯಾಗಿದೆ.
ಇಂಡಿಯಾ ಫಾರ್ ಐಎಎಸ್ ಅಕಾಡೆಮಿಯಿಂದ 22 ಹಾಗೂ ಡಾ.ರಾಜಕುಮಾರ್ ಅಕಾಡೆಮಿಯಿಂದ 11 ಅಭ್ಯರ್ಥಿಗಳು ಯುಪಿಎಸ್ಸಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಕರ್ನಾಟಕದ ಅಭ್ಯರ್ಥಿಗಳ ಪಟ್ಟಿ ಇಂತಿದೆ..
- 143 - ಹರ್ಷ್ ಪ್ರಶಾರ್
- 176 - ಲಕ್ಷ್ಮೀ ಪ್ರಿಯಾ ಉಪಾಧ್ಯ
- 197 - ಸೂರಜ್ ಡಿ
- 198 - ಸೌರಭ್ ನರೇಂದ್ರ
- 216 - ಶಿವಂ ಕುಮಾರ್
- 224 - ರವಿರಾಜ್ ಅವಸ್ತಿ
- 260 - ಸೌರಭ್ ಕೆ
- 345 - ದಾಮಿನಿ ಎಂ ದಾಸ್
- 362 - ಶೃತಿ ಯರಘಟ್ಟಿ
- 410 - ಢೋಂಗ್ರೇ ರೇವಯ್ಯ
- 413 - ಶ್ರೇಯಂಶ್ ಸುರಾನಾ
- 448 - ಭಾನುಪ್ರಕಾಶ್ ಜೆ
- 501 - ಧನುಷ್ ಕುಮಾರ್
- 582 - ರಾಹುಲ್ ಕುಮಾರ್
- 589 - ಸಿದ್ದಲಿಂಗಪ್ಪ ಕೆ ಪೂಜಾರ್
- 617 - ಮೇಘನಾ ಐ ಎನ್
- 659 - ನಿಮಿಶಾಂಬ ಸಿಪಿ
- 690 - ತನ್ಮಯ್ ಎಂ ಎಸ್
- 745 - ಮೊಹಮ್ಮದ್ ಸಿದ್ದಿಕ್ ಶರೀಫ್
- 813 - ಅಭಿಷೇಕ್ ಕೆ ಎಚ್
- 866 - ನಗುಲಾ ಕೃಪಾಕರ್
- 929 - ಮನೋಜ್ ಹೆಚ್ ಪಿ
- 890 - ಅರ್ಜುನ್ ನಾಯಕ
- 394 - ವಿಷ್ಣು ಶಶಿಕುಮಾರ್
- 746 - ಅಕ್ಷಯಗೌಡ
- 390 - ಪೂಜಾ
ಎರಡನೇ ಬಾರಿ ಪರೀಕ್ಷೆ ಬರೆದು ಪಾಸ್ ಆದ ವೈದ್ಯ:ಡಾ. ಭಾನುಪ್ರಕಾಶ್ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ ತೆರ್ಗಡೆ ಹೊಂದಿದ್ದಾರೆ. 4 ವರ್ಷ ವೈದ್ಯರಾಗಿ ಸೇವೆ ಸಲ್ಲಿಸಿದ್ದ ಅವರು ತಮ್ಮ 2ನೇ ಪ್ರಯತ್ನದಲ್ಲೇ 448ನೇ ರ‍್ಯಾಂಕ್ ಗಳಿಸಿ ಸಾಧನೆ ಮಾಡಿದ್ದಾರೆ. ಡಾ.ಭಾನುಪ್ರಕಾಶ್ ಮಾತನಾಡಿ, ತಾಯಿ ಅಂಗನವಾಡಿ ಟೀಚರ್ ಆಗಿದ್ದರು, ಅವರನ್ನು ನೋಡಿ ಡಾಕ್ಟರ್ ಆದೆ. ಡಾಕ್ಟರ್ ವೃತ್ತಿಯನ್ನು ಮಾಡುವಾಗ ಒಂದು ದಿನ ಇನ್ನೇನಾದರೂ ಸಾಧಿಸಬೇಕು ಎನ್ನಿಸಿತ್ತು. ಆದ್ದರಿಂದ ಯು.ಪಿ.ಎಸ್.ಸಿ ಬರೆದು ಎರಡನೇ ಪ್ರಯತ್ನದಲ್ಲಿ ಪಾಸ್ ಆಗಿದ್ದೇನೆ ಎಂದು ಸಂತಸ ಹಂಚಿಕೊಂಡರು.