ಕರ್ನಾಟಕ

karnataka

ETV Bharat / state

ಯುಪಿಎಸ್ ಬ್ಯಾಟರಿಯಲ್ಲಿ ಕಾಣಿಸಿಕೊಂಡ ಬೆಂಕಿ: ಮನೆ ಕಾಂಪೌಂಡ್​ನಲ್ಲಿದ್ದ ಕಾರು ಕರಕಲು - ಮಂಜುನಾಥ್ ನಗರದಲ್ಲಿ ಕಾರು ಸ್ಪೋಟ

ಮನೆಯೊಂದರ ಯುಪಿಎಸ್ ಬ್ಯಾಟರಿಯಲ್ಲಿ (UPS battery) ಏಕಾಏಕಿ ಬೆಂಕಿ ಕಾಣಿಸಿಕೊಂಡಿತು. ಬಳಿಕ ನೋಡ ನೋಡುತ್ತಿದ್ದಂತೆ ಅಗ್ನಿ ಎಲ್ಲೆಡೆ ವ್ಯಾಪಿಸಿದೆ. ಪರಿಣಾಮ, ಬೆಂಕಿ ಪಾರ್ಕಿಂಗ್ ಜಾಗದಲ್ಲಿದ್ದ ಕಾರಿಗೂ ವಿಸ್ತರಿಸಿದೆ‌.

Car blast
ಕಾರು ಸ್ಫೋಟ

By

Published : Nov 18, 2021, 4:25 PM IST

ಬೆಂಗಳೂರು: ಇಟ್ಟಮಡು ಬಳಿಯ ಮಂಜುನಾಥ್ ನಗರದಲ್ಲಿ ತಡರಾತ್ರಿ ಮನೆಯೊಂದರ ಯುಪಿಎಸ್ ಬ್ಯಾಟರಿಯಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಕಾರಿಗೂ ವ್ಯಾಪಿಸಿ ಸ್ಫೋಟಗೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ವಿವರ:

ಮನೆಯ ಸದಸ್ಯರೆಲ್ಲರೂ ನಿದ್ರಿಸುತ್ತಿದ್ದ ವೇಳೆ, ತಡರಾತ್ರಿ 2.30ರ ವೇಳೆ ಯುಪಿಎಸ್ ಬ್ಯಾಟರಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತು. ನೋಡನೋಡುತ್ತಿದ್ದಂತೆ ಅಗ್ನಿ ಎಲ್ಲೆಡೆ ವ್ಯಾಪಿಸಿದೆ. ಪಾರ್ಕಿಂಗ್ ಲಾಟ್​ನಲ್ಲಿ ನಿಲ್ಲಿಸಿದ್ದ ಕಾರಿಗೂ ವಿಸ್ತರಿಸಿತು. ಅಷ್ಟೊತ್ತಿಗಾಗಲೇ ಎಚ್ಚರಗೊಂಡಿದ್ದ ಮನೆಮಂದಿ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ.

ಹೊತ್ತಿ ಉರಿಯುತ್ತಿದ್ದ ಬೆಂಕಿ ಆರಿಸಲು ಮುಂದಾದರೂ ಇದಕ್ಕಿದ್ದಂತೆ ಕಾರು ಸ್ಫೋಟಗೊಂಡಿತು. ನಂತರ ಮನೆ ಕೆಳಮಹಡಿಗೂ ಬೆಂಕಿ ವ್ಯಾಪಿಸಿದೆ. ಸ್ಥಳಕ್ಕೆ ಬಂದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಸಾವುನೋವು ಆಗಿಲ್ಲ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಕುರಿತು ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಶಾರ್ಟ್ ಸರ್ಕ್ಯೂಟ್​​​ನಿಂದ ಬೆಂಕಿ: ಮಳೆಯ ನಡುವೆಯೂ ಹೊತ್ತಿ ಉರಿದ ಡಾಬಾ

ABOUT THE AUTHOR

...view details