ಬೆಂಗಳೂರು:ಸರ್ಕಾರವನ್ನು ಮುಜುಗರಕ್ಕೀಡು ಮಾಡಲು ಮಾಸ್ಕ್ ಮೇಲೆ 40% ಸರ್ಕಾರ ಎಂದು ಬರೆದುಕೊಂಡು ಕಾಂಗ್ರೆಸ್ ಸದಸ್ಯರು ಸದನಕ್ಕೆ ಬಂದ ಹಿನ್ನೆಲೆಯಲ್ಲಿ ಪರಿಷತ್ ಕಲಾಪದಲ್ಲಿ ಗದ್ದಲ ಎದ್ದಿತು. ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ವಾಕ್ಸಮರದಿಂದ ಸದನವು ಸಹಜ ಸ್ಥಿತಿಗೆ ಬಾರದ ಹಿನ್ನೆಲೆಯಲ್ಲಿ ಕಲಾಪವನ್ನು10 ನಿಮಿಷ ಮುಂದೂಡಲಾಯಿತು.
ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ಪರಿಷತ್ನಲ್ಲಿ 40 ಪರ್ಸೆಂಟ್ ಕಮಿಷನ್ ಎಂದು ಮಾಸ್ಕ್ ಮೇಲೆ ಬರೆಸಿಕೊಂಡು ಕಾಂಗ್ರೆಸ್ ಸದಸ್ಯರು ಸದನಕ್ಕೆ ಆಗಮಿಸಿದರು. ಸಿಎಂಗೆ ಮುಜುಗರ ಮಾಡಲು ಮಾಸ್ಕ್ ಹಾಕಿದ ಪರ್ಸಂಟೇಜ್ ಸರ್ಕಾರ ಎನ್ನುವ ಬರಹ ಹಾಕಿಕೊಂಡು ಬಂದಿದ್ದರು. ಇದು ಆಡಳಿತ ಪಕ್ಷ ಸದಸ್ಯರನ್ನು ಕೆರಳಿಸಿದ್ದು, ಪ್ರತಿಪಕ್ಷದ ವಿರುದ್ಧ ಬಿಜೆಪಿ ಸದಸ್ಯರು ಹರಿಹಾಯ್ದರು.
ಇದನ್ನೂ ಓದಿ:PAYCM ಪೋಸ್ಟರ್ ಪ್ರಕರಣ: ಐವರು ಕಾಂಗ್ರೆಸ್ ಕಾರ್ಯಕರ್ತರ ಬಂಧನ