ಬೆಂಗಳೂರು:ಇಂದಿನಿಂದಲೇ ಉಪ್ಪಾರ ಅಭಿವೃದ್ಧಿ ಸಮಿತಿ ಮುಂದುವರೆಸಿ ಆದೇಶ ಹೊರಡಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಮಾಜಿ ಸಿಎಂ ದಿವಂಗತ ಎಸ್. ನಿಜಲಿಂಗಪ್ಪ ಅವರ ಜನ್ಮ ದಿನದ ಹಿನ್ನೆಲೆ ನಿಜಲಿಂಗಪ್ಪ ಅವರ ಪ್ರತಿಮೆಗೆ ಸಿಎಂ ಯಡಿಯೂರಪ್ಪ ಪುಷ್ಪಾರ್ಪಣೆ ಸಲ್ಲಿಸಿದರು. ನಂತರ ಮಾತನಾಡಿದ ಸಿಎಂ, ನಾಡು, ನುಡಿಗೆ ಕರ್ನಾಟಕದ ಏಕೀಕರಣಕ್ಕೆ ನಿಜಲಿಂಗಪ್ಪ ನೀಡಿದ ಕೊಡುಗೆಯನ್ನು ಸ್ಮರಿಸಿದರು.
ನಿಜಲಿಂಗಪ್ಪ ಅವರ ಪ್ರತಿಮೆಗೆ ಪುಷ್ಪಾರ್ಪಣೆ ಮಾಡಿದ ಸಿಎಂ ಯಡಿಯೂರಪ್ಪ ಓದಿ: ರೈತರ ದಾರಿ ತಪ್ಪಿಸುವ ಕೆಲಸ ಮಾಡಬೇಡಿ; ಪ್ರತಿಪಕ್ಷಕ್ಕೆ ಮುಖ್ಯಮಂತ್ರಿ ಬಿಎಸ್ವೈ ಮನವಿ
ಉಪ್ಪಾರ ಸಮುದಾಯದ ಅಭಿವೃದ್ಧಿಗೆ ಸಮಿತಿ ಮುಂದುವರೆಸುತ್ತೇವೆ. ಇಂದು ಉಪ್ಪಾರ ಸಮುದಾಯದ ಸ್ವಾಮೀಜಿಗಳು ಭೇಟಿ ನೀಡಿ ಸಮಿತಿ ಮುಂದುವರೆಸಲು ಮನವಿ ಮಾಡಿದ್ದಾರೆ. ಹಿಂದೆ ಸಮಿತಿ ರಚಿಸಲಾಗಿತ್ತು. ಆದರೆ ಯಾವುದೋ ಕಾರಣಕ್ಕೆ ಅದನ್ನು ನಿಲ್ಲಿಸಲಾಗಿದ್ದು, ಇಂದಿನಿಂದಲೇ ಉಪ್ಪಾರ ಅಭಿವೃದ್ಧಿ ಸಮಿತಿ ಮುಂದುವರೆಸಿ ಆದೇಶ ಮಾಡುತ್ತೇನೆ ಎಂದರು.
ಕಾಂಗ್ರೆಸ್ ಸದನ ಬಹಿಷ್ಕಾರದ ಬಗ್ಗೆ ಗೊತ್ತಿಲ್ಲ. ಕಾಂಗ್ರೆಸ್ನವರನ್ನು ಕರೆದು ಮತಾಡುತ್ತೇನೆ. ಆದರೆ ಮುಖಂಡರು ಮಾತುಕತೆಗೆ ಬರಲ್ಲ ಎಂದಿದ್ದಾರೆ ಎಂದು ಸಿಎಂ ತಿಳಿಸಿದರು.