ಕರ್ನಾಟಕ

karnataka

ETV Bharat / state

ಲಾಕ್​ಡೌನ್​ನಲ್ಲಿ ಪ್ರತಿ ಠಾಣೆ ವ್ಯಾಪ್ತಿಯೊಳಗೆ 100 ವಾಹನ ಸೀಜ್ ಮಾಡಲು ಟಾರ್ಗೆಟ್‌..

100 ವಾಹನಗಳು ಸೀಜ್ ಮಾಡೋದು ಅನಿವಾರ್ಯವಾದ ಕಾರಣ ಸಿಬ್ಬಂದಿಗೆ ಬಹಳಷ್ಟು ಒತ್ತಡ ನಿರ್ಮಾಣವಾಗುತ್ತಿದೆ ಎಂದು ಪೊಲೀಸರೊಬ್ಬರು (ಹೆಸರು ಹೇಳದವರು) ತಿಳಿಸಿದ್ದಾರೆ. ಒಂದು ಗಾಡಿ ಜಪ್ತಿ ಮಾಡುವಾಗ ‌ಜನರು ಮಾತಿನ ಚಕಮಕಿ ನಡೆಸುತ್ತಾರೆ ಅಥವಾ ಪ್ರಮುಖ ವ್ಯಕ್ತಿಗಳಿಂದ ಫೋನ್ ಮಾಡಿಸಿ ಒತ್ತಡ ನಿರ್ಮಾಣ ಮಾಡುತ್ತಾರೆ.

Unnecessary traffic during lockdown: target to size 100 vehicles
ಲಾಕ್​ಡೌನ್​​ ಸಂದರ್ಭದಲ್ಲಿ ಅನಗತ್ಯ ಓಡಾಟ: ಆಯಾ ಠಾಣೆಗಳಿಗೆ ಟಾರ್ಗೆಟ್ ನೀಡಿದ ಹಿರಿಯ ಅಧಿಕಾರಿಗಳು

By

Published : Apr 13, 2020, 10:42 AM IST

ಬೆಂಗಳೂರು :ಲಾಕ್​ಡೌನ್​​ ಸಂದರ್ಭದಲ್ಲಿ ಅಗತ್ಯ ವಸ್ತುಗಳಿಗೆ ಹಾಗೂ ತುರ್ತು ಓಡಾಟಕ್ಕೆ ಪಾಸ್ ಹಿಡಿದು ಓಡಾಟ ಮಾಡಿ ಎಂದರೂ ಕೂಡಾ ಜನತೆ ನಿರ್ಲಕ್ಷ್ಯ ತೋರಿದ್ದಾರೆ. ಸದ್ಯ ಪೊಲೀಸರು ಸಂಪೂರ್ಣ ಅಲರ್ಟ್‌ ಆಗಿದ್ದಾರೆ.

ಈವರೆಗೆ 27 ಸಾವಿರದ 605 ವಾಹನಗಳು ಸೀಜ್ ಆಗಿವೆ. ಈ ಎಲ್ಲಾ ವಾಹನಗಳ ಮೇಲೆ NDMA sec 51ಅಡಿ ಕೇಸ್ ದಾಖಲಿಸಲಾಗಿದೆ(NDMA- national disaster management authority act). Section 51-ಯಾವುದೇ ವ್ಯಕ್ತಿ ಸರ್ಕಾರ ಅಥವಾ ಕೇಂದ್ರ ಸರ್ಕಾರದ ನಿಯಮ ಪಾಲಿಸದಿದ್ದಲ್ಲಿ ಹಾಗೂ ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಲ್ಲಿ ಹಾಕುವ ಕೇಸ್ ಇದಾಗಿದೆ.

ಲಾಕ್​ಡೌನ್​​ ಸಂದರ್ಭದಲ್ಲಿ ಅನಗತ್ಯ ಓಡಾಟ.. ಆಯಾ ಠಾಣೆಗಳಿಗೆ ಟಾರ್ಗೆಟ್ ನೀಡಿದ ಹಿರಿಯ ಅಧಿಕಾರಿಗಳು..

ಸಿಬ್ಬಂದಿಗೆ ಟಾರ್ಗೆಟ್:ಅಗತ್ಯ ಓಡಾಟಕ್ಕೆ ಪಾಸ್ ತೆಗೆದುಕೊಳ್ಳುವಂತೆ ಸೂಚಿಸಿದರೂ ಕೂಡಾ ಕೆಲವರು ಪಾಸ್ ತೆಗೆದುಕೊಳ್ಳದೆ ವಿನಾಕಾರಣ ಓಡಾಡುತ್ತಿದ್ದಾರೆ. ಹೀಗಾಗಿ ಪ್ರತೀ ಠಾಣೆಗಳಿಗೆ ಪ್ರತಿದಿನ ಅನಗತ್ಯವಾಗಿ ಓಡಾಟ ಮಾಡುವ ವಾಹನಗಳನ್ನ ಸೀಜ್ ಮಾಡುವಂತೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಅಂದರೆ‌ ದಿನಕ್ಕೆ 100 ವಾಹನಗಳು ಟಾರ್ಗೆಟ್​ ಆಗಿದ್ದು, ಪೊಲೀಸರು ಪ್ರತಿ ದಿನ 100ವಾಹನಗಳನ್ನ ಸೀಜ್ ಮಾಡೋದು ಅನಿವಾರ್ಯವಾಗಿದೆ. ಹೀಗಾಗಿ ಪ್ರತಿ ಠಾಣೆಯ ಓರ್ವ ಪಿಎಸ್​ಐ ನೇತೃತ್ವದ ತಂಡ ಕಾರ್ಯಾಚರಣೆಗೆ ಇಳಿದಿದ್ದು, ಅನಗತ್ಯವಾಗಿ ಸಂಚಾರ ಮಾಡುತ್ತಿರುವ ವಾಹನಗಳನ್ನು ಸೀಜ್ ಮಾಡ್ತಿದ್ದಾರೆ.

ಟಾರ್ಗೆಟ್​ನಿಂದ ಸಿಬ್ಬಂದಿಗೆ ಒತ್ತಡ :100 ವಾಹನಗಳು ಸೀಜ್ ಮಾಡೋದು ಅನಿವಾರ್ಯವಾದ ಕಾರಣ ಸಿಬ್ಬಂದಿಗೆ ಬಹಳಷ್ಟು ಒತ್ತಡ ನಿರ್ಮಾಣವಾಗುತ್ತಿದೆ ಎಂದು ಪೊಲೀಸರೊಬ್ಬರು (ಹೆಸರು ಹೇಳಲು ಇಚ್ಛೆ ಪಟ್ಟಿಲ್ಲ) ತಿಳಿಸಿದ್ದಾರೆ. ಒಂದು ಗಾಡಿ ಜಪ್ತಿ ಮಾಡುವಾಗ ‌ಜನರು ಮಾತಿನ ಚಕಮಕಿ ನಡೆಸುತ್ತಾರೆ ಅಥವಾ ಪ್ರಮುಖ ವ್ಯಕ್ತಿಗಳಿಂದ ಫೋನ್ ಮಾಡಿಸಿ ಒತ್ತಡ ನಿರ್ಮಾಣ ಮಾಡುತ್ತಾರೆ. ಇದರಿಂದ ಪೊಲೀಸರು ಬಹಳ ಕಿರಿ ಕಿರಿ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗುತ್ತೆ.

ಮತ್ತೊಂದೆಡೆ ನೂರು ವಾಹನಗಳು ಟಾರ್ಗೆಟ್ ಆಗಿರುವ ಕಾರಣ ಈ ಸಂದರ್ಭವನ್ನು ನಿಭಾಯಿಸೋದೆ ದೊಡ್ಡ‌ ಹರಸಾಹಸವಾಗಿದೆ. ಈಗಾಗಲೇ ಖಾಸಗಿ ವಾಹನದಲ್ಲಿ ಸಿಎಂ, ಗೃಹಸಚಿವ, ಕಮಿಷನರ್ ಸಡನ್ ರೌಂಡ್ಸ್ ಮಾಡುವ‌ ಕಾರಣ ಭಯದಲ್ಲಿ ಜೀವನ ಸಾಗಿಸುವಂತಾಗಿದೆ ಎಂದು ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.

ABOUT THE AUTHOR

...view details