ಬೆಂಗಳೂರು :ಜೂನ್ 14ರಂದು ಲಾಕ್‌ಡೌನ್ ಕೊನೆಯ ದಿನವಾಗಿದೆ. ನಂತರ ಏಕಾಏಕಿ ಅನ್‌ಲಾಕ್ ಮಾಡುವುದಿಲ್ಲ. ಹಂತ ಹಂತವಾಗಿ ತೆರೆಯಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಆರ್.ಅಶೋಕ್, ನಗರದಲ್ಲಿ ಸಾವಿನ ಸಂಖ್ಯೆ ಇಳಿಕೆಯಾಗುತ್ತಿದೆ. ಪಾಸಿಟಿವ್ ಸಂಖ್ಯೆ ಕೂಡ 500ಕ್ಕಿಂತ ಇಳಿಕೆಯಾಗಬೇಕು. ಹೀಗಾಗಿ, ಲಾಕ್ಡೌನ್ನ ಒಂದೇ ದಿನಕ್ಕೆ ತೆರೆಯುವುದಿಲ್ಲ.
ಜೂನ್ 14ರ ಬಳಿಕ ಅಗತ್ಯ ವಸ್ತುಗಳ ಖರೀದಿ ಸಮಯ ವಿಸ್ತರಣೆ ಎಂದ ಅಶೋಕ್ ನಾಲ್ಕೈದು ಹಂತಗಳಲ್ಲಿ ತೆರೆಯಲಾಗುವುದು. ಸದ್ಯ ಅಗತ್ಯ ವಸ್ತುಗಳ ಖರೀದಿಗೆ 6 ರಿಂದ 10ರ ಬದಲು, 6 ರಿಂದ 12 ಗಂಟೆವರೆಗೆ ಅವಕಾಶ ಕೊಡಲಾಗುವುದು. ಪಾರ್ಕ್ಗಳಲ್ಲಿ ವಾಕಿಂಗ್ಗೆ ಅವಕಾಶ ಕೊಡುವ ಬಗ್ಗೆ ಚರ್ಚೆ ನಡೆದಿದೆ ಎಂದರು.
ನಗರದಲ್ಲಿ ಐನೂರು ಒಳಪಟ್ಟು ಪಾಸಿಟಿವ್ ಬಂದರೆ ಅಷ್ಟೇ ಅನ್‌ಲಾಕ್ ಸಾಧ್ಯವಾಗುತ್ತದೆ. ಜೂನ್ 11 ಅಥವಾ 12ರಂದು ತಜ್ಞರ ಜೊತೆ ಸಭೆ ನಡೆಸಿ ಸಿಎಂ ತೀರ್ಮಾನ ಮಾಡಬಹುದು.
ಸದ್ಯ ನಗರದಲ್ಲಿ ಓಡಾಟ ಹೆಚ್ಚಾಗಿರುವ ಬಗ್ಗೆ ಸಿಎಂ ಗಮನಿಸಿದ್ದು, ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿಗಳ ಜೊತೆ ಇದನ್ನು ತಡೆಯುವ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದರು.