ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ಎಂದು ಹೇರಲಾಗಿದ್ದ ಲಾಕ್ಡೌನ್ ಇಂದು ಮುಂಜಾನೆ 5 ಗಂಟೆಯಿಂದ ತೆರವಾಗಿದ್ದು, ಎಂದಿನಂತೆ ವಾಹನಗಳು ರಸ್ತೆಗೆ ಇಳಿದಿವೆ.
ಬೆಂಗಳೂರಿನಲ್ಲಿ ಲಾಕ್ಡೌನ್ ತೆರವು: ಯಥಾಸ್ಥಿತಿಗೆ ಮರಳಿದ ಜನಜೀವನ - ಬೆಂಗಳೂರು
ಬೆಂಗಳೂರಿನಲ್ಲಿ ಇಂದಿನಿಂದ ಲಾಕ್ಡೌನ್ ತೆರವಾಗಿದ್ದು, ವಾಹನಗಳು ರಸ್ತೆಗಿಳಿದಿವೆ. ಇನ್ನು ಜನಜೀವನ ಯಥಾಸ್ಥಿತಿಗೆ ಬಂದಿದೆ.
ಬೆಂಗಳೂರಿನಲ್ಲಿ ಜನಜೀವನ ಯಥಾಸ್ಥಿತಿ
ಕೇವಲ ಲಾಕ್ಡೌನ್ ಕೊರೊನಾ ತಡೆಗಟ್ಟಲು ಪರಿಹಾರವಲ್ಲ ಎಂದು ಮುಖ್ಯಮಂತ್ರಿ ಈಗಾಗಲೇ ಹೇಳಿಕೆ ನೀಡಿದ್ದಾರೆ. ಹೀಗಾಗಿ ಸದ್ಯ ದೈನಂದಿನ ಚಟುವಟಿಕೆಗಳಲ್ಲಿ ಜನರು ಬ್ಯುಸಿಯಾಗಿದ್ದಾರೆ. ಇನ್ನು ಟೋಲ್ಗೇಟ್ಗಳು ಸಹ ಓಪನ್ ಆಗಿವೆ.
ಪ್ರಮುಖ ರಸ್ತೆಗಳಲ್ಲಿ, ಫ್ಲೈ ಓವರ್ ಬಳಿ ಲಾ ಅಂಡ್ ಟ್ರಾಫಿಕ್ ಪೊಲೀಸರು ಜಂಟಿಯಾಗಿ ಬ್ಯಾರಿಕೇಡ್ ಹಾಕಿದ್ದರು. ಸದ್ಯ ಅವುಗಳ ತೆರವು ಕಾರ್ಯಚರಣೆಯನ್ನ ಪೊಲೀಸರು ಮಾಡಿದ್ದಾರೆ. ಆದರೆ, ಕಂಟೇನ್ಮೆಂಟ್ ಝೋನ್ಗಳಿಗೆ ಮಾತ್ರ ನಿರ್ಬಂಧ ಹೇರಲಾಗಿದೆ.