ಕರ್ನಾಟಕ

karnataka

ETV Bharat / state

ಕುಡಿದ ಮತ್ತಿನಲ್ಲಿ ಅಪರಿಚಿತನಿಗೆ ಇರಿದು ಕೊಂದ ದುಷ್ಕರ್ಮಿಗಳು

ಬೆಂಗಳೂರಲ್ಲಿ ಅಪರಿಚಿತ ವ್ಯಕ್ತಿವೋರ್ವ ಕೊಲೆಯಾಗಿದ್ದಾನೆ. ಕುಡಿದ ಅಮಲಿನಲ್ಲಿ ದುಷ್ಕರ್ಮಿಗಳು ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆಗೈದಿದ್ದಾರೆ.

ಅಪರಿಚಿತರಿಂದ ವ್ಯಕ್ತಿಯ ಕೊಲೆ

By

Published : May 12, 2019, 11:56 AM IST

Updated : May 12, 2019, 12:03 PM IST

ಬೆಂಗಳೂರು :ಕುಡಿದ ಅಮಲಿನಲ್ಲಿ ಅಪರಿಚಿತ ವ್ಯಕ್ತಿವೋರ್ವನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಕೆ.ಆರ್. ಸರ್ಕಲ್​​​ನ ಮುಖ್ಯ ಇಂಜಿನಿಯರ್ಸ್ ಕಚೇರಿ ಗೇಟ್ ಬಳಿ ನಡೆದಿದೆ.

ಅಪರಿಚಿತ ವ್ಯಕ್ತಿಯ ಎದೆ ಹಾಗೂ ಪಕ್ಕೆಲುಬಿನ ಜಾಗಕ್ಕೆದುಷ್ಕರ್ಮಿಗಳುಡ್ರ್ಯಾಗರ್​ನಿಂದ ಇರಿದು ಕೊಲೆ‌ ಮಾಡಿರುವ ಶಂಕೆ ವ್ಯಕ್ತವಾಗಿದೆ‌.

ತಡರಾತ್ರಿ ಬಾರ್​ನಲ್ಲಿ ಕುಡಿದು ಕಿರಿಕ್ ಮಾಡ್ಕೊಂಡು ಗೇಟ್ ಬಳಿಯೇ ಡ್ರ್ಯಾಗರ್​ನಿಂದ ವ್ಯಕ್ತಿಗೆ ಇರಿದು ಹಂತಕರು ಎಸ್ಕೇಪ್ ಆಗಿದ್ದಾರೆ. ತೀವ್ರ ರಕ್ತಸ್ರಾವವಾಗಿದ್ದ ವ್ಯಕ್ತಿ ಗೇಟ್ ಬಳಿಯೇ ಸಾವನ್ನಪ್ಪಿದ್ದಾನೆ.

ಈ ವ್ಯಕ್ತಿಯ ಮೃತದೇಹವನ್ನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌
ಇನ್ನು ಮೃತ ವ್ಯಕ್ತಿ ಯಾರು ಮತ್ತು ಕೊಲೆ ಮಾಡಿರುವವರು ಯಾರೆಂಬುದು ತನಿಖೆಯಿಂದ ತಿಳಿದುಬರಲಿದೆ.

Last Updated : May 12, 2019, 12:03 PM IST

ABOUT THE AUTHOR

...view details