ನೆಲಮಂಗಲ :ಬೈಕ್‌ನಲ್ಲಿ ಬಂದ ಗ್ಯಾಂಗ್‌ವೊಂದು ನಡುರಸ್ತೆಯಲ್ಲೇ ಯುವಕನ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಸುಭಾಷ್ ನಗರದ ಟಿಬಿ ಬಸ್ ನಿಲ್ದಾಣದಲ್ಲಿ ರೇವಂತ್ ಅಲಿಯಾಸ್ ಸೃಷ್ಟಿ ಎಂಬಾತನ ಮೇಲೆ ಬೈಕಿನಲ್ಲಿ ಬಂದ ಯುವಕರ ಗುಂಪು ಹಲ್ಲೆ ಮಾಡಿ ಚಾಕುವಿನಿಂದ ಚುಚ್ಚಿ ಪರಾರಿಯಾಗಿದೆ. ಕೂಡಲೇ ಸ್ಥಳೀಯರು ಗಾಯಗೊಂಡಿದ್ದ ಯುವಕನ್ನು ಆಸ್ಪತ್ರೆಗೆ ಸಾಗಿಸಿದರಾದರೂ ಯುವಕ ಬದುಕುಳಿದಿಲ್ಲ.
ಘಟನೆ ಸಂಬಂಧ ಎಸ್ಪಿ ಡಾ.ಕೋನವಂಶಿ ಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದು, ಆರೋಪಿಗಳ ಪತ್ತೆಗಾಗಿ ತಂಡ ರಚಿಸಿದ್ದಾರೆ. ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಮಾಡಲಾಗುವುದೆಂದು ತಿಳಿಸಿದ್ದಾರೆ. ಘಟನೆಯ ಕುರಿತಾದ ವಿಡಿಯೋ ಮೊಬೈಲ್ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಬೆಂಗಳೂರು ಆತ್ಮಹತ್ಯೆಯ ಡೆತ್‌ನೋಟ್: ಅಪ್ಪನ ರಾಸಲೀಲೆ, ದೌರ್ಜನ್ಯಗಳನ್ನು ಇಂಚಿಂಚೂ ವಿವರಿಸಿದ ಮಕ್ಕಳು!