ಗಂಗಾವತಿ :ಬಡವರಿಗೆ ಕೈಗೆಟಕುವ ಬೆಲೆಯಲ್ಲಿ ಚಿಕಿತ್ಸೆ ನೀಡುತ್ತಿರುವ ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ಸುಮಾರು 9 ಲಕ್ಷ ರೂಪಾಯಿ ಮೌಲ್ಯದ ಕೋವಿಡ್ ಚಿಕಿತ್ಸಾ ಪರಿಕರಗಳನ್ನು ದಾನಿಯೊಬ್ಬರು ಗುಪ್ತವಾಗಿ ನೀಡಿದ್ದಾರೆ.
ಲಕ್ಷಾಂತರ ಮೌಲ್ಯದ ವೈದ್ಯಕೀಯ ಪರಿಕರಗಳನ್ನು ನೀಡಿದ ದಾನಿ ಯಾರು ಎಂಬುವುದರ ಬಗ್ಗೆ ಆಸ್ಪತ್ರೆ ಕಡೆಯಿಂದ ಮಾಹಿತಿ ಸಿಕ್ಕಿಲ್ಲ. ದಾನಿ ನೀಡಿದ ಮೆಡಿಕಲ್ ಕಿಟ್ ಐದು ಜಂಬೋ ಆಕ್ಸಿಜನ್ ಸಿಲಿಂಡರ್, ಐದು ಆಕ್ಸಿಜನ್ ಸಾಂಧ್ರಕಗಳು, 30 ಫಲ್ಸ್ ಆಕ್ಸಿಮೀಟರ್, ಫೇಸ್ ಮಾಸ್ಕ್ , ಪಿಪಿಇ ಕಿಟ್ ಸೇರಿದಂತೆ ನಾನಾ ವಸ್ತುಗಳನ್ನು ಒಳಗೊಂಡಿವೆ.