ಬೆಂಗಳೂರು: ಕೆ.ಆರ್ ಪುರ ಸಮೀಪದ ಆವಲಹಳ್ಳಿ ಎಲೆ ಮರಿಯಪ್ಪ ಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ರುಂಡ, ಕೈ-ಕಾಲು ಸೇರಿದಂತೆ ದೇಹದ ನಾನಾ ಭಾಗಗಳು ಕತ್ತರಿಸಿ ಶವವನ್ನು ತಂದು ಕೆರೆಗೆ ಎಸೆಯಲಾಗಿದೆ.
ಬೆಂಗಳೂರು: ಕೆರೆಯಲ್ಲಿ ರುಂಡ-ಕೈಕಾಲು ಇಲ್ಲದ ಅಪರಿಚಿತ ವ್ಯಕ್ತಿಯ ಶವ ಪತ್ತೆ - ಆವಲಹಳ್ಳಿ ಕರೆ
ಕೆ.ಆರ್ ಪುರ ಸಮೀಪದ ಆವಲಹಳ್ಳಿ ಎಲೆ ಮರಿಯಪ್ಪ ಕೆರೆಯಲ್ಲಿ ಶವ ಪತ್ತೆಯಾಗಿದ್ದು ರುಂಡ, ಕೈ-ಕಾಲು ಸೇರಿದಂತೆ ದೇಹದ ನಾನಾ ಭಾಗಗಳು ಕತ್ತರಿಸಿ ಶವವನ್ನು ತಂದು ಕೆರೆಗೆ ಎಸೆಯಲಾಗಿದೆ ಎಂದು ಶಂಕಿಸಲಾಗಿದೆ.

ಸ್ಥಳೀಯರು ಅವಲಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಸ್ಥಳಕ್ಕಾಗಮಿಸಿದ ಎಸ್ಪಿ ರವಿ ಡಿ. ಚನ್ನಣ್ಣವರ್ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಅವರು, ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ಬೇರೆಡೆ ಕೊಲೆ ಮಾಡಿ ನಿನ್ನೆ ರಾತ್ರಿ ಕೆರೆಗೆ ತಂದು ಎಸೆದಿರುವ ಶಂಕೆ ವ್ಯಕ್ತವಾಗಿದೆ. ತನಿಖೆ ಚುರುಕುಗೊಳಿಸಿಲಾಗಿದೆ. 4 ತಂಡಗಳನ್ನು ರಚಿಸಿ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಲಾಗುವುದು ಎಂದಿದ್ದಾರೆ. ಘಟನೆ ಸಂಬಂಧ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಎಟಿಎಂನಿಂದ ಹಣ ದೋಚಲು ಹೋಗಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಖದೀಮ