ಬೆಂಗಳೂರು:ಇಂದು ಚಂದ್ರ ಗ್ರಹಣ ಹಿನ್ನೆಲೆ, ಮೂಢನಂಬಿಕೆ ವಿರೋಧಿ ಒಕ್ಕೂಟದಿಂದ ನಗರದ ಮೌರ್ಯ ಸರ್ಕಲ್ ಬಳಿ ವಿವಿಧ ಹಣ್ಣು, ತಿಂಡಿ ತಿನಿಸು ತಿನ್ನುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಲಾಯಿತು.
ಚಂದ್ರಗ್ರಹಣದ ವೇಳೆಯೇ ಬೀದಿಯಲ್ಲಿ ತಿಂದು ಜನ ಜಾಗೃತಿ - ocial fighter Narasimha Murthy
ಚಂದ್ರ ಗ್ರಹಣದ ಮೂಢನಂಬಿಕೆ ವಿರೋಧಿಸಿ ನಗರದ ಮೌರ್ಯ ಸರ್ಕಲ್ ಬಳಿ ಮೂಢನಂಬಿಕೆ ವಿರೋಧಿ ಒಕ್ಕೂಟ ಪ್ರತಿಭಟನೆ ನಡೆಸಿದೆ.
ಸಾಮಾಜಿಕ ಹೋರಾಟಗಾರ ನರಸಿಂಹಮೂರ್ತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಗ್ರಹಣದ ಸಮಯದಲ್ಲಿ ತಿನ್ನುವ ಹಾಗಿಲ್ಲ ಎಂಬ ಸಂಪ್ರದಾಯಕ್ಕೆ ವಿರೋಧ ವ್ಯಕ್ತಡಿಸಿದ ಪ್ರತಿಭಟನಾಕಾರರು ಮೂಢನಂಬಿಕೆ ತೊಲಗಲಿ ಎಂದು ಘೋಷಣೆ ಕೂಗಿ, ಆತಂಕ ಸೃಷ್ಟಿಸುವ ಜ್ಯೋತಿಷಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಸಾಮಾಜಿಕ ಹೋರಾಟಗಾರ ನರಸಿಂಹ ಮೂರ್ತಿ, ಗ್ರಹಣ ಅನ್ನೋದು ಭೂಗೋಳದಲ್ಲಿ ನಡೆಯುವ ಒಂದು ವಿಸ್ಮಯ. ಆದರೆ ಜ್ಯೋತಿಷಿಗಳು ಹೇಳ್ತಾರೆ ಮನೆಯಿಂದ ಹೊರ ಬರಬೇಡಿ ಬಂದರೆ ಹಗಾಗುತ್ತೆ ಹೀಗಾಗುತ್ತೆ ಅಂತಾ ಭಯ ಹುಟ್ಟಿಸಿದ್ದಾರೆ. ಗ್ರಹಣ ಸಮಯದಲ್ಲಿ ಊಟ ಮಾಡಬಾರದಂತೆ. ಅವರು ಮಾಡಬೇಡಿ ಅನ್ನೋದನ್ನೇ ನಾವು ಮಾಡ್ತೇವೆ. ಇವತ್ತು ನಾವು ಇಲ್ಲಿ ತಿಂತೇವೆ ಅದೇನಾಗುತ್ತೆ ನೋಡೋಣ ಎಂದರು.