ಬೆಂಗಳೂರು:ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಕಾಲಿಕ ನಿಧನ ಭಾರತೀಯ ಚಿತ್ರರಂಗವನ್ನು ಸ್ತಬ್ಧಗೊಳಿಸಿದೆ. ಯಾರೂ ಊಹಿಸಲಾರದ ಘಟನೆ ಇದಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಅಪ್ಪು ಇದುವರೆಗೂ ಅಭಿನಯಿಸಿದ ಎಲ್ಲಾ ಚಲನಚಿತ್ರಗಳು ಕುಟುಂಬ ಸಮೇತ ವೀಕ್ಷಿಸಬಹುದಾದ ಚಿತ್ರಗಳಾಗಿವೆ. ಮನರಂಜನೆ ಹಾಗೂ ಸಮಾಜಕ್ಕೆ ಉತ್ತಮ ಸಂದೇಶ ಕೊಡುತ್ತಿದ್ದರು. 46ನೇ ಸಣ್ಣ ವಯಸ್ಸಿನಲ್ಲಿ ಸಾವನ್ನಪ್ಪಬಾರದಿತ್ತು. ನಯ, ವಿನಯ, ಜತೆಗೆ ಸೃಜನಶೀಲ ನಟ ಹಾಗೂ ನಾಗರೀಕನಾಗಿ ಅವರು ಗುರುತಿಸಿಕೊಂಡಿದ್ದರು ಎಂದರು.