ಬೆಂಗಳೂರು:ಕಾಂಗ್ರೆಸ್ ನಾಯಕರು ಮಂಗಳೂರಿಗೆ ಪೆಟ್ರೋಲ್ ಸುರಿಯುವ ಕೆಲಸ ಮಾಡಬಾರದು. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಜಮೀರ್ ಅಹ್ಮದ್ ಮಂಗಳೂರಿಗೆ ನಿಯೋಗ ಹೋಗುವುದು ಕೆಲ ಪುಡಾರಿಗಳಿಗೆ ಮತ್ತೆ ಗಲಭೆಗೆ ಪ್ರಚೋದನೆ ನೀಡಿದಂತೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಉರಿತಿರೋ ಬೆಂಕಿಗೆ ಕಾಂಗ್ರೆಸ್ ಪೆಟ್ರೋಲ್ ಸುರಿಯುವ ಕೆಲಸ ಮಾಡಬಾರದು: ಡಿವಿಎಸ್ - Union Minister DVS press conference
ಯಾವುದೇ ಕಾಂಗ್ರೆಸ್ ನಾಯಕರು ಪೆಟ್ರೋಲ್ ಸುರಿಯುವ ಕೆಲಸ ಮಾಡಬಾರದು. ಮಂಗಳೂರಿಗೆ ನಿಯೋಗ ತೆರಳಲು ಇದು ಸಕಾಲ ಅಲ್ಲ. ಇದರಿಂದ ಪುಡಾರಿಗಳು ಮತ್ತೆ ಗಲಭೆ ಹೆಚ್ಚಿಸುತ್ತಾರೆ ಎಂದು ಕೇಂದ್ರ ಸಚಿವ ಸದಾನಂದಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
![ಉರಿತಿರೋ ಬೆಂಕಿಗೆ ಕಾಂಗ್ರೆಸ್ ಪೆಟ್ರೋಲ್ ಸುರಿಯುವ ಕೆಲಸ ಮಾಡಬಾರದು: ಡಿವಿಎಸ್ Union Minister DVS press conference](https://etvbharatimages.akamaized.net/etvbharat/prod-images/768-512-5434504-thumbnail-3x2-sasasadada.jpg)
ಕೇಂದ್ರ ಸಚಿವ ಡಿವಿಎಸ್
ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ
ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲು ದಕ್ಷಿಣ ಕನ್ನಡದ ಕಾಂಗ್ರೆಸ್ ನಾಯಕರಿಗೆ ಶಾಂತಿ ಕಾಪಾಡಲು ಹೇಳಿ. ಇನ್ನು ಜಿಲ್ಲೆಯಲ್ಲಿ ಶಾಂತಿ ನೆಲೆಸಿದ ನಂತರ ಹೋಗಿ ಎಂದು ಹೇಳಿದರು.
ಕಾಂಗ್ರೆಸ್ ಎಲ್ಲೆಡೆ ಅಸ್ತಿತ್ವ ಕಳೆದುಕೊಂಡಿದೆ. ಅದಕ್ಕಾಗಿಯೇ ಈ ರೀತಿಯ ಪ್ರಚೋದನೆಗಳನ್ನು ನೀಡುತ್ತಿದ್ದಾರೆ ಎಂದು ದೂರಿದರು.