ಕರ್ನಾಟಕ

karnataka

ETV Bharat / state

ಟ್ವಿಟ್ಟರ್‌ನಲ್ಲಿ 4 ಲಕ್ಷ ತಲುಪಿದ ಡಿವಿಎಸ್​ ಫಾಲೋವರ್ಸ್‌ ಸಂಖ್ಯೆ: ಧನ್ಯವಾದ ಸಲ್ಲಿಸಿದ ಕೇಂದ್ರ ಸಚಿವ - ಕೇಂದ್ರ ಸಚಿವ ಸದಾನಂದಗೌಡ,

ತಮ್ಮ ಟ್ವಿಟ್ಟರ್​ ಖಾತೆಯ ಫಾಲೋವರ್ಸ್​ ಸಂಖ್ಯೆ ನಾಲ್ಕ ತಲುಪಿದ್ದಕ್ಕೆ ಕೇಂದ್ರ ಸಚಿವ ಸದಾನಂದ ಗೌಡ ಧನ್ಯವಾದ ಸಲ್ಲಿಸಿದ್ದಾರೆ. ಜನ ತೋರುವ ಪ್ರೀತಿ-ಅಭಿಮಾನ ಇನ್ನಷ್ಟು ಕೆಲಸ ಮಾಡಲು ಹುರುಪು ನೀಡುತ್ತದೆ. ಅವರು ಮಾಡುವ ಟೀಕೆ-ಟಿಪ್ಪಣಿಗಳು ತಪ್ಪನ್ನು ತಿದ್ದಿಕೊಳ್ಳಲು, ಕಾರ್ಯಕ್ಷಮತೆಯನ್ನು ಇನ್ನಷ್ಟು ಸುಧಾರಿಸಿಕೊಳ್ಳಲು ಸಹಾಯವಾಗುತ್ತವೆ‌ ಎಂದು ಬರೆದುಕೊಂಡಿದ್ದಾರೆ.

Sadananda Gowda Twitter,  Sadananda Gowda Twitter followers,  Sadananda Gowda Twitter followers reached four lakhs,  Union Minister DV Sadananda Gowda,  Union Minister DV Sadananda Gowda news, ಸದಾನಂದಗೌಡ ಟ್ವಿಟ್ಟರ್​, ಸದಾನಂದಗೌಡ ಟ್ವಿಟರ್‌ ಫೊಲೋವರ್ಸ್, ನಾಲ್ಕು ಲಕ್ಷ ತಲುಪಿದ ಸದಾನಂದಗೌಡ ಟ್ವಿಟರ್‌ ಫೊಲೋವರ್ಸ್, ಕೇಂದ್ರ ಸಚಿವ ಸದಾನಂದಗೌಡ, ಕೇಂದ್ರ ಸಚಿವ ಸದಾನಂದಗೌಡ ಸುದ್ದಿ,
ಸಂಗ್ರಹ ಚಿತ್ರ

By

Published : Nov 18, 2020, 7:52 AM IST

ಬೆಂಗಳೂರು:ಟ್ವಿಟ್ಟರ್​ ಖಾತೆಯ ಫಾಲೋವರ್ಸ್​​ ಸಂಖ್ಯೆ ನಾಲ್ಕು ಲಕ್ಷ ದಾಟಿರುವುದಾಗಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹಂಚಿಕೊಂಡಿದ್ದು, ಟ್ವಿಟ್ಟರ್​ನಲ್ಲಿ ಈ ಮೈಲಿಗಲ್ಲು ತಲುಪಲು ಕಾರಣೀಕರ್ತರಾದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

ಸಾರ್ವಜನಿಕ ಜೀವನದಲ್ಲಿರುವ ನನ್ನಂತಹ ಜನಪ್ರತಿನಿಧಿಗಳಿಗೆ ಜನರ ಅಭಿಪ್ರಾಯ ತುಂಬಾನೇ ಮುಖ್ಯವಾಗುತ್ತದೆ. ಜನ ತೋರುವ ಪ್ರೀತಿ-ಅಭಿಮಾನ ಇನ್ನಷ್ಟು ಕೆಲಸ ಮಾಡಲು ಹುರುಪು ನೀಡುತ್ತದೆ. ಅವರು ಮಾಡುವ ಟೀಕೆ-ಟಿಪ್ಪಣೆಗಳು ತಪ್ಪನ್ನು ತಿದ್ದಿಕೊಳ್ಳಲು, ಕಾರ್ಯಕ್ಷಮತೆಯನ್ನು ಇನ್ನಷ್ಟು ಸುಧಾರಿಸಿಕೊಳ್ಳಲು ಸಹಾಯವಾಗುತ್ತವೆ‌ ಎಂದು ಬರೆದುಕೊಂಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಮುಂಚೂಣಿಗೆ ಬಂದಿರುವ ಸಾಮಾಜಿಕ ಜಾಲತಾಣಗಳು ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಮುಕ್ತ ಅವಕಾಶ ಕಲ್ಪಿಸಿದೆ. ಕ್ಷಣಾರ್ಧದಲ್ಲಿ ಮಾಹಿತಿಗಳನ್ನು ಪಸರಿಸಬಹುದು. ಅದರ ಉಪಯೋಗ ಮತ್ತು ದುರುಪಯೋಗ ಎರಡೂ ಇವೆ. ನಾವೆಲ್ಲರೂ ಆದಷ್ಟು ಈ ಆಧುನಿಕ ಸಂವಹನ ಸಾಧನಗಳನ್ನು ಸಮಾಜದ ಒಳಿತಿಗಾಗಿ, ದೇಶದ ಹಿತಕ್ಕಾಗಿ, ಪ್ರಜಾತಂತ್ರವನ್ನು ಗಟ್ಟಿಗೊಳಿಸುವುದಕ್ಕಾಗಿ ಬಳಸೋಣ. ಉತ್ತಮ ವಿಚಾರಗಳನ್ನು ಹಂಚಿಕೊಳ್ಳಲು, ಜ್ಞಾನವನ್ನು ಪಸರಿಸಲು, ಜನರಿಗೆ ಪ್ರಸ್ತುತವಾದ, ಸಮೃದ್ಧವಾದ ಹಾಗೂ ಸತ್ಯವಾದ ಮಾಹಿತಿಗಳನ್ನಷ್ಟೇ ಹಂಚಿಕೊಳ್ಳಲು ಈ ವೇದಿಕೆಗಳನ್ನು ಉಪಯೋಗಿಸೋಣ ಎಂದು ಕೇಂದ್ರ ಸಚಿವ ಡಿವಿಎಸ್ ಕರೆ ನೀಡಿದ್ದಾರೆ.

ABOUT THE AUTHOR

...view details