ಕರ್ನಾಟಕ

karnataka

ETV Bharat / state

ಪ್ರಹ್ಲಾದ್ ಜೋಶಿ ಪುತ್ರಿ ಆರತಕ್ಷತೆಗೆ ಆಗಮಿಸಿ ವಧು-ವರರಿಗೆ ಶುಭಕೋರಿದ ಅಮಿತ್ ಶಾ - ಪ್ರಹ್ಲಾದ್ ಜೋಶಿ ಪುತ್ರಿ ಆರತಕ್ಷತೆ ಕಾರ್ಯಕ್ರಮ ಆಗಮಿಸಿದ ಅಮಿತ್​ ಶಾ

ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಮಗಳ ರಿಸೆಪ್ಷನ್​ ಕಾರ್ಯಕ್ರಮಕ್ಕೆ ಗೃಹ ಸಚಿವ ಅಮಿತ್​ ಶಾ, ಲೋಕಸಭಾಧ್ಯಕ್ಷ ಓಂ ಪ್ರಕಾಶ್​ ಬಿರ್ಲಾ ಸೇರಿದಂತೆ ಅನೇಕ ಗಣ್ಯರು, ಮಠಾಧೀಶರು ಭಾಗವಹಿಸಿ ನೂತನ ವಧು-ವರರಿಗೆ ಶುಭ ಕೋರಿದರು.

union-minister-amit-shah-attended-pralhad-joshi-daughter-marriage
ಕೇಂದ್ರ ಸಚಿವ ಅಮಿತ್ ಶಾ

By

Published : Sep 2, 2021, 9:57 PM IST

ಹುಬ್ಬಳ್ಳಿ:ನಗರದಲ್ಲಿ ನಡೆದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪುತ್ರಿ ಆರತಕ್ಷತೆ ಕಾರ್ಯಕ್ರಮಕ್ಕೆ ಗೃಹ ಸಚಿವ ಅಮಿತ್ ಶಾ ಆಗಮಿಸಿ ವಧು-ವರರಿಗೆ ಶುಭಕೋರಿದರು. ಈ ಸಂದರ್ಭದಲ್ಲಿ ಅಮಿತ್ ಶಾ ಅವರಿಗೆ ಪ್ರಹ್ಲಾದ್ ಜೋಶಿ ಶಾಲು ಹೊದಿಸಿ, ಹಾರ ತೊಡಿಸಿ ಸನ್ಮಾನಿಸಿದರು.

ಪ್ರಹ್ಲಾದ್ ಜೋಶಿ ಪುತ್ರಿ ಆರತಕ್ಷತೆ ಆಗಮಿಸಿ ವಧು-ವರರಿಗೆ ಶುಭಕೋರಿದ ಕೇಂದ್ರ ಸಚಿವ ಅಮಿತ್ ಶಾ

ಲೋಕಸಭಾಧ್ಯಕ್ಷ ಓಂ ಪ್ರಕಾಶ್ ಬಿರ್ಲಾ ಸೇರಿದಂತೆ ಇತರೆ ಗಣ್ಯಾತಿಗಣ್ಯರು ಆಗಮಿಸಿದ್ದರು. ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ಶ್ರೀರಾಮುಲು, ಮುನಿರತ್ನ, ಶಿವರಾಮ ಹೆಬ್ಬಾರ್, ವಿ. ಸೋಮಣ್ಣ, ಶಶಿಕಲಾ ಜೊಲ್ಲೆ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸಚಿವರು, ಶಾಸಕರು, ಸಂಸದರು, ಆರ್​ಎಸ್​ಎಸ್ ಪ್ರಮುಖರು, ವಿವಿಧ ಮಠಾದೀಶರು, ಗಣ್ಯ ಉದ್ಯಮಿಗಳು ರಿಸೆಪ್ಷನ್​ನಲ್ಲಿ ಭಾಗಿಯಾಗಿದ್ದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪುತ್ರಿ ಆರತಕ್ಷತೆ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ

ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಮದುವೆಗೆ ಸಾಕ್ಷಿಯಾದರು. ಆದ್ರೆ ಮದುವೆ ಸಂಭ್ರಮದಲ್ಲಿ ಮಾಸ್ಕ್ ಹಾಕುವುದನ್ನೆ ನಾಯಕರು ಮರೆತಿದ್ದು ಎದ್ದು ಕಾಣುತ್ತಿತ್ತು.

ಪ್ರಹ್ಲಾದ್ ಜೋಶಿ ಪುತ್ರಿ ಆರತಕ್ಷತೆ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು

ABOUT THE AUTHOR

...view details