ನವದೆಹಲಿ/ಬೆಂಗಳೂರು :ರಸಗೊಬ್ಬರ ಘಟಕಗಳ ದಕ್ಷತೆಯ ಸುಧಾರಣೆ ಜೊತೆಗೆ ರಸಗೊಬ್ಬರಗಳು ಅಸಮತೋಲಿತ ಬಳಕೆಯ ಸಮಸ್ಯೆ ಪರಿಹರಿಸಲು ಸುಧಾರಣೆಗಳ ಅಗತ್ಯವಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ ವಿ ಸದಾನಂದ ಗೌಡ ಹೇಳಿದ್ದಾರೆ.
ರೈತರ ಆದಾಯ ದುಪ್ಪಟ್ಟು ಮಾಡುವ ಮೋದಿ ದೃಷ್ಟಿಕೋನಕ್ಕೆ ಅವಶ್ಯ ಸುಧಾರಣೆ : ಸಚಿವ ಡಿವಿಎಸ್ - ಡಿ.ವಿ ಸದಾನಂದಗೌಡ
ರಸಗೊಬ್ಬರ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು ಈ ಉಪ ಗುಂಪಿನ ಸಭೆಯ ಉದ್ದೇಶವಾಗಿದೆ..

ಡಿ.ವಿ ಸದಾನಂದಗೌಡ ಮಾತು
ಚಿಂತನ ಶಿಬಿರದ ಉಪ ಗುಂಪಿನ 2ನೇ ಸಭೆಯ ಅಧ್ಯಕ್ಷತೆ ವಹಿಸಿ ರಸಗೊಬ್ಬರ ವಲಯ ಬಾಧ್ಯಸ್ಥರೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ರಸಗೊಬ್ಬರ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು ಈ ಉಪ ಗುಂಪಿನ ಸಭೆಯ ಉದ್ದೇಶವಾಗಿದೆ ಎಂದರು.
ಸಭೆಯಲ್ಲಿ ಅನೇಕ ರಾಜ್ಯಗಳ ಅಧಿಕಾರಿಗಳು ಭಾಗಿಯಾಗಿ ತಮ್ಮ ವಲಯ ಎದುರಿಸುತ್ತಿರುವ ಸವಾಲುಗಳು ಮತ್ತು ವಿವಿಧ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.