ಆನೇಕಲ್ (ಬೆಂಗಳೂರು): ಇಲ್ಲಿನ ದೊಡ್ಡಕೆರೆಯ ಬಳಿ ಅಪರಿಚಿತ ವ್ಯಕ್ತಿಯ ಶವ ಕೊಲೆಯಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. 30 ವರ್ಷ ಆಸುಪಾಸಿನ ವ್ಯಕ್ತಿಯ ಶವವಾಗಿದ್ದು, ಚಾಕುವಿನಿಂದ ಇರಿದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಆನೇಕಲ್: ದೊಡ್ಡಕೆರೆ ಬಳಿ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಕೊಲೆ - man was murdered
ದೊಡ್ಡಕೆರೆಯ ಬಳಿ ಅಪರಿಚಿತ ವ್ಯಕ್ತಿಯ ಶವ ಕೊಲೆಯಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. 30 ವರ್ಷ ಆಸುಪಾಸಿನ ವ್ಯಕ್ತಿಯ ಶವವಾಗಿದ್ದು, ಚಾಕುವಿನಿಂದ ಇರಿದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಆನೇಕಲ್: ದೊಡ್ಡಕೆರೆ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆ
ಸ್ಥಳಿಯರೊಬ್ಬರ ಮಾಹಿತಿ ಪ್ರಕಾರ ವ್ಯಕ್ತಿಯ ಜತೆ ಮಹಿಳೆ ಹಾಗೂ ಮಗು ಸಹ ಇದ್ದು, ಮೂವರು ಈ ಭಾಗದಲ್ಲಿ ಓಡಾಡುತ್ತಿರುವುದನ್ನು ಗಮನಿಸಿದ್ದರು. ಆದರೆ ವ್ಯಕ್ತಿಯೋರ್ವನ ಶವ ಕೊಲೆಯಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ವ್ಯಕ್ತಿಯ ದೇಹದ ಮೇಲೆ ಚಾಕುವಿನಿಂದ ಇರಿದ ಗುರುತುಗಳು ಕಂಡುಬಂದಿದೆ. ಇದಲ್ಲದೆ ಮಹಿಳೆ ಹಾಗೂ ಮಗು ಸ್ಥಳದಿಂದ ನಾಪತ್ತೆಯಾಗಿದ್ದಾರೆ.
ಸ್ಥಳಿಯರು ಈ ಭಾಗದಲ್ಲಿ ಓಡಾಡುವ ವೇಳೆ ರಕ್ತದ ಮಡುವಿನಲ್ಲಿ ಶವ ಕಂಡು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇದೀಗ ಘಟನೆ ಸಂಬಂಧ ಆನೇಕಲ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.